ಶನಿವಾರ, ಮಾರ್ಚ್ 21, 2015

ಯುಗಾದಿ ೨೦೧೫





ಸೂರ್ಯ ಕಿರಣಗಳ ಹೊಸ ಹೊಳಪಿನಲಿ
ಜೀವನದ ಕಹಿಗಳೆಲ್ಲವು ಕರಗಲಿ,
ನವ ಚೈತ್ರದ ಹೊಸ ಹುರುಪಿನಲಿ
ಬಾಳಿನ ಸಿಹಿಗಳೆಲ್ಲವು ನಿಮ್ಮದಾಗಲಿ.

ಹಿಂದಿನದನ್ನು ಮರೆಸುತ ಹೊಸ ವರುಷವು ಬರಲಿ
ಈ ಯುಗಾದಿಯು ನಿಮಗೆ ಸುಖ ಸಂತಸಗಳು ತರಲಿ.

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು :)






ಗುರುವಾರ, ಜನವರಿ 15, 2015

ಸಂಕ್ರಾಂತಿ



ಚಳಿಯನ್ನು ಕರಗಿಸುತ ಹೊರಟನು ಸೂರ್ಯ ಉತ್ತರದೆಡೆಗೆ
ಸೂಸುತ ಚಂದನ ತೀಡಿದ ಕಾಂತಿಯ ಭೂಮಿಯ ಕಡೆಗೆ
ಹೊಸ ಸಂಕ್ರಣಮವ ಸ್ವಾಗತಿಸಿದೆ ಎಳ್ಳು-ಬೆಲ್ಲದ ಬೆಸುಗೆ
ಈ ಹಬ್ಬವು ನೀಡಲಿ ಸುಖ-ಸಂತಸ ನಿಮ್ಮ ಮನ-ಮನೆಗೆ

ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು :)

ಗುರುವಾರ, ಜನವರಿ 01, 2015

೨೦೧೫



ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮಿಂದಿದೆ ಧರೆ
ನವ ವಸಂತವ ಹಸನಾಗಿಸಿದೆ ತುಂತುರು ವರ್ಷಧಾರೆ

ಹಳೆಯದೆಲ್ಲಾ ಗತವು, ಬಂದಿದೆ ಹೊಸ ವರ್ಷದ ಕರೆ
ತುಂಬಿರಲಿ ನಮ್ಮಲ್ಲಿ ಸಂತಸ, ಸದಾ ಸುರಿಯಲಿ ಹರ್ಷಧಾರೆ

೨೦೧೫ ವಸಂತದ ಹಾರ್ದಿಕ ಶುಭಾಶಯಗಳು :)

ಸೋಮವಾರ, ನವೆಂಬರ್ 24, 2014

ಉತ್ತರ



ತಣ್ಣೀರ ಎರಚಿ ಆಸೆಗಳಿಗೆ
ದೂರ ಹೋದೆ ಬರಲಾರದೆ ನನ್ನ ಹತ್ತಿರ

ನಿನ್ನ ಅಗಲಿಕೆಯ ಪ್ರಶ್ನೆಗಳಿಗೆ
ಈಗ ನನ್ನದು ಬರಿಯ ಕಣ್ಣೀರಿನ ಉತ್ತರ.

ಶನಿವಾರ, ನವೆಂಬರ್ 01, 2014

ಕನ್ನಡದ ಕಂಪು



ಮೂಡಣದಿ ಹಳದಿಯ ಚಿತ್ತಾರ, ಪಡುವಣದಿ ಕೆಂಪಿನ ಚಿತ್ತಾರ
ಇದ ಪ್ರಕೃತಿಯೇ ಬಿಡಿಸಿರುವಳು ತನ್ನ ಕೈಯ್ಯಾರ||
ಪಸರಿಸುವ ಕನ್ನಡದ ಕಂಪನು ಅವಳ ಅನುಸಾರ
ಆಚರಿಸುವ ಕನ್ನಡಮ್ಮನ ಹಬ್ಬವ ತುಂಬು ಮನಸಾರ||

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು