ಗುರುವಾರ, ಏಪ್ರಿಲ್ 10, 2014

ಅಂಗಿ ಗುಂಡಿ!!!



ರಂಗು ರಂಗಿನ ಅಂಗಿಯಂತೆ ಒಲವಿದು, ತೊಡಲು ಬೇಕಿದೆ ಕನಸಿನ ಗುಂಡಿಗಳು.
ಸುಂದರ ಮಾಲೆಯಂತೆ ಬದುಕಿದು, ಅದ ಬೆಸೆದಿವೆ ನೋವು ನಲಿವಿನ ಕೊಂಡಿಗಳು.

ಭಾನುವಾರ, ಮಾರ್ಚ್ 16, 2014

ಹೋಕುಳಿ



ಸುಂದರ, ಪ್ರೀತಿಯ ಬಳುವಳಿ
ಎಲ್ಲರಿಗು ಹಂಚಿ ನಿಮ್ಮಲ್ಲಿ ಹೆಚ್ಚಿಸಿಕೊಳ್ಳಿ.

ಪ್ರೀತಿಯಂತೆ ಬಣ್ಣದ ಹೋಕುಳಿ
ಎಲ್ಲರಿಗು ಹಚ್ಚಿ ನೀವೂ ಹಚ್ಚಿಸಿಕೊಳ್ಳಿ!!!

ಸೋಮವಾರ, ಫೆಬ್ರವರಿ 24, 2014

ನೀನೆಂದರೆ...



ನೀನೆಂದರೆ...

ಶುಭ್ರ ವಿಶಾಲ ಬಾನಿನಂತೆ
ಜೀವ ಉಳಿಸುವ ನೀರಿನಂತೆ
ತಂಪನು ತರವು ಗಾಳಿಯಂತೆ
ಕತ್ತಲ ಕರಗಿಸುವ ಬೆಂಕಿಯಂತೆ
ತಾಳ್ಮೆ ತೋರುವ ಭೂಮಿಯಂತೆ.

ಆಗಿರಲು ನೀ ಸುಂದರ ಪ್ರಕೃತಿಯಂತೆ
ಕಾಡದು ನೀ ನನ್ನೊಡನೆ ಇರದ ಚಿಂತೆ||

ಗುರುವಾರ, ಜನವರಿ 30, 2014

ಹೊಸ ತಿರುವು



ನಿಂತಿರುವೆ ಬಾಳಿನ ಹೊಸ ತಿರುವಿನಲ್ಲಿ
ಮುಂದೇನೆಂಬುದರ ಕಾಣದ ಸುಳಿವಿನಲ್ಲಿ.

ಮುಂದಿರುವುದು ಕನಸುಗಳ ಮಾರುವ ಬೀದಿಯೋ? ಇಲ್ಲಾ
ಅಂಕು ಡೊಂಕಿನ ಬಿದ್ದೇಳುವ ಹಾದಿಯೋ? ನಾ ತಿಳಿದಿಲ್ಲ!!!

ಕನಸುಗಳ ಬೀದಿಯಾದರೆ, ಅವುಗಳ ಕೊಂಡು ನನಸಾಗಿಸುವೆ
ಬೇರೆ ಹಾದಿಯಾದರೆ, ಬದುಕನು ಅದು ಹೇಗೋ ಸಾಗಿಸುವೆ.

ಆದರೂ
ನಿಂತಿರುವೆ ಬಾಳಿನ ಹೊಸ ತಿರುವಿನಲ್ಲಿ
ಮುಂದೆ ಸಾಗಲು ನಾಳೆಗಳ ಇರುವಿನಲ್ಲಿ.

ಗುರುವಾರ, ಡಿಸೆಂಬರ್ 26, 2013

ಜಿ.ಎಸ್.ಎಸ್


ತೀರದ ಮನದ ಭಾವಕೆ,
ಅರ್ಪಿಸಿದರು ತಮ್ಮ ತನು ಮನ.
ತೀರಿದ ಕವಿ ಜೀವಕೆ,
ಎರಡು ಸಾಲಿನ ಪುಟ್ಟ ಪದ ನಮನ.

ಗುರುವಾರ, ಡಿಸೆಂಬರ್ 19, 2013

ಬೈರಾಗಿ


ಅಂದುಕೊಂಡಿದ್ದೆಲ್ಲಾ ನಡೆದು ನೀ ಗೆದ್ದರೆ ನಿನ್ನ ಹಿಂದೆ ಜಗದ ಬಲವಿದೆ
ಅಂದುಕೊಂಡಿದ್ದು ನಡೆಯದೆ ಸೋಲುಂಡರೆ ನಿನ್ನೆದುರಿಗೆ ಕಷ್ಟದ ಬದುಕಿದೆ||

ಕ್ರೂರ ಜಗವಿದು, ಗೆಲುವಿನಲ್ಲಿ ನೀ ಮೆರೆವಾಗ ಎಲ್ಲವೂ ನಿನ್ನದೆ, ನೀ ಭೋಗಿ
ಸೋತು ಬರಿಗೈಲಿ ಇರುವಾಗ, ತಪ್ಪೆಲ್ಲವೂ ನಿನ್ನದೆ, ನೀ ಒಂಟಿ ಬೈರಾಗಿ!!!

ಶುಕ್ರವಾರ, ನವೆಂಬರ್ 29, 2013

ತೇರು



ನಿನ್ನೊಡನೆ ಕಳೆದ ಸವಿಕ್ಷಣಗಳ ಬೇರಿಗೆ,
ಮೂಡಿಹುದು ನೆನಪಿನ ಚಿಗುರು||

ಹೊರಟಿರುವ ನಿನ್ನ ಪ್ರೀತಿ ತೇರಿಗೆ,
ಸಿಂಗಾರಗೊಂಡಿದೆ ನನ್ನೆದೆಯ ಊರು||