ಮಂಗಳವಾರ, ಸೆಪ್ಟೆಂಬರ್ 30, 2014

ಬಾಳೆಂದರೆ?



ಬಾಳೆಂದರೆ...
ಕಾಣದ ಕೈಗಳ ಬರವಣಿಗೆಯೊ?
ನಮ್ಮ ವಿಧಿಯ ಮೆರವಣಿಗೆಯೊ?

ಇನ್ನೂ ಹುಡುಕುತಲಿರುವೆ ಉತ್ತರ,
ಚಾಚಿದೆ ಕುತೂಹಲ ಬಾನೆತ್ತರ

ಮಂಗಳವಾರ, ಸೆಪ್ಟೆಂಬರ್ 23, 2014

ಬಂಡಿ



ಮೂಡುವ ಹೊಸ ಕನಸುಗಳ
ಕಾಡುವ ಹಳೇ ನೆನಪುಗಳ
ಹಳಿಗಳ ಮೇಲೆ ಸಾಗಿದೆ ಜೀವನದ ಬಂಡಿ

ಕರುಣೆ ಬೇಡುವ ಕರಗಳ
ಪ್ರೀತಿ ನೀಡುವ ಮನಗಳ
ಬೆಸೆದಿಹುದು ಬಾಳಿನ ಕೊಂಡಿ!

ಶುಕ್ರವಾರ, ಆಗಸ್ಟ್ 29, 2014

ಎಲ್ಲೆಲ್ಲೂ ಗಣಪ



ನೆಲೆಸಿರುವನು ನಮ್ಮಲ್ಲೇ ದೇವ ಗಜಾನನ
ಹರಸುತ ನಮ್ಮನ್ನು ಪ್ರತಿ ಕ್ಷಣ ಪ್ರತಿ ದಿನ

ಅಮ್ಮಂದಿರಿಗೆ ಪ್ರೀತಿಯ ಬಾಲಚಂದಿರ
ಕಂದಮ್ಮಗಳಿಗೆ ಮುದ್ದಿನ ಲಂಬೋಧರ

ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ವಿದ್ಯಾಗಣಪತಿ
ವಿಘ್ನ್ಯಗಳ ಅಳಿಸಿ ಹರಸುವ ಮಹಾಗಣಪತಿ

ಎಲ್ಲರಿಗೂ ಸುಬುದ್ಧಿ ನೀಡುವ ಬುದ್ಧಿವಿಧಾತ
ತನ್ನ ಭಕ್ತರಿಗೆ ಸದಾ ಸಿದ್ಧಿಸುವ ಸಿದ್ಧಿದಾತ

ನೆಲೆಸಿರುವನು ನಮ್ಮಲ್ಲೇ ದೇವ ಮೂಷಿಕವಾಹನ
ಈ ಹಬ್ಬದಲ್ಲಿ ಪರಿಶುದ್ದವಾಗಲಿ ನಮ್ಮ ತನು-ಮನ

ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು :)

ಭಾನುವಾರ, ಜುಲೈ 27, 2014

ಹೇಗೆ???



ಹೇಗೆ ನುಡಿಯಲಿ ನೀನಿರದ ಪದಗಳನು
ಹೇಗೆ ಕಳಿಯಲಿ ನೀನಿರದ ಕ್ಷಣಗಳನು,
ಹೇಗೆ ಮರೆಯಲಿ ನಿನ್ನ ನೆನಪುಗಳನು,
ಹೇಗೆ ಅಳಿಸಲಿ ಅವು ಕೊಟ್ಟ ಕಣ್ಣೀರ ಹನಿಗಳನು!!!

ಬುಧವಾರ, ಜುಲೈ 16, 2014

ಧಾವಂತ



ಪ್ರತಿ ಕ್ಷಣವೂ ನಿನ್ನ ನೋಡಲು ನನ್ನಲಿ ಧಾವಂತ
ನಿನ್ನ ಕಾಣದೆ ಸತ್ತಂತೆ, ಇದ್ದರೂ ನಾ ಜೀವಂತ!!!

ಗುರುವಾರ, ಜುಲೈ 03, 2014

ಏಕೆ???



ಅದೆಲ್ಲೋ ಏಕೆ ಹುಡುಕಲಿ,
ನಿನ್ನದೆ ನೋಟವಿರಲು ನನ್ನ ಕಣ್ಣಲಿ
ನಿನ್ನನು ಏಕೆ ನಾ ನೆನೆಯಲಿ,
ಉಸಿರಾಗಿರುವಾಗ ನೀ ನನ್ನಲಿ||

ಮಂಗಳವಾರ, ಜೂನ್ 03, 2014

ಮಿತಭಾಷಿ



ನನ್ನಿಂದ ಹೊರಡದ ಮಾತುಗಳು,
ನಿನ್ನ ಕಂಡಾಗಿನಿಂದ ನಾನಾಗಿರುವೆ ಮಿತಭಾಷಿ
ಮಿಟುಕದ ಕಣ್ಣ ರೆಪ್ಪೆಗಳು,
ಒಂದು ಕ್ಷಣ ನಿಂತ ಎದೆ ಬಡಿತವೆ ಅದಕೆ ಸಾಕ್ಷಿ!!!