ಮಂಗಳವಾರ, ಮೇ 01, 2018

ಅಪ್ಪ
ಈಗ ನೀನು ಅದೆಲ್ಲಿರುವೆಯೊ ನಮಗೆ ತಿಳಿಯದು,
ಎಲ್ಲಿದ್ದರೇನು ನಿನ್ನ ನೆನಪುಗಳು ನಮ್ಮಿಂದ ಅಳಿಯದು,
ನೀನರದ ನೋವು ನಮ್ಮಲ್ಲಿ ಎಂದಿಗೂ ಸುಳಿಯದು,
ಏಕೆಂದರೆ ನೀ ನಮಗೆ ಮಾಡಿದ ತ್ಯಾಗ ಕಳೆಯದು,
ಎಲ್ಲೇ ಇರು ಸುಖ-ಶಾಂತಿಯ ಪಯಣವಾಗಲಿ ನಿನ್ನದು,
ನೀ ತೋರಿಸಿ ಕೊಟ್ಟ ಆದರ್ಶದ ಬದುಕಾಗಲಿ ನಮ್ಮದು||

ಭಾನುವಾರ, ಫೆಬ್ರವರಿ 04, 2018

ಮಂಗಳವಾರ, ಅಕ್ಟೋಬರ್ 17, 2017

ನಗುವಿನ ಕಂತೆಸುಳಿದಾಡದು ಎನ್ನೊಳು ಚಿಂತೆ, ಸನಿಹದಲಿ ನೀನಿರಲು ನನಸಿನಂತೆ
ತೆರೆದರೆ ನಿನ್ನ ತೊದಲು ನುಡಿಗಳ ಸಂತೆ, ನಾ ಕೊಳ್ಳುವೆ ನಗುವಿನ ಕಂತೆ||

ಶುಕ್ರವಾರ, ಜುಲೈ 21, 2017

ಸೆರೆನೀ ನನ್ನ ಮರೆತರೆ,
ನಾ ಕೊಡುವೆ ನೆನಪುಗಳ ಉಡುಗೊರೆ||
ನೀನಾಗ ನನ್ನ ನೆನೆದರೆ,
ಆ ಕ್ಷಣವೇ ನಾನಾಗುವೆ ನಿನ್ನ ಸೆರೆ||

ಗುರುವಾರ, ಜುಲೈ 13, 2017

ಮುಗ್ಧತೆನಿನ್ನ ಮುಗ್ಧತೆಯಿಂದ  ನಗುವನ್ನು ನಾ ಕೊಂಡುಕೊಂಡೆನು
ಆ ನಗುವಿನಿಂದ ಮತ್ತೆ ನನ್ನ ಬದುಕನ್ನು ಕಂಡುಕೊಂಡೆನು
ಹೊಸ ಬದುಕಿಗೆ ನಿನ್ನ ದೆಸೆಯಿಂದ ಪ್ರೀತಿಯ ತಂದುಕೊಂಡೆನು
ಆ ಪ್ರೀತಿಯು ನನ್ನ ಪಾಲಿನ ದೈವ ಎಂದುಕೊಂಡೆನು||

ಸೋಮವಾರ, ಜೂನ್ 05, 2017

ಸಾಧ್ಯವೆ?ಜೀವನದ ಕೆಲ ಕ್ಷಣಗಳ ಸೋಲಿಸಿದರೂ, ಬದುಕನ್ನೇ ಸೋಲಿಸಲು ಸಾಧ್ಯವೆ?
ನಾವು ಸಾವನ್ನು ಗೆಲ್ಲಲಾಗದಿದ್ದರೂ ಅದರ ಭಯವನ್ನು ಗೆಲ್ಲಬಹುದಲ್ಲವೆ||

ಶುಕ್ರವಾರ, ಜೂನ್ 02, 2017

ಸೂತ್ರಇಲ್ಲಿ ಏನೂ ನಿಲ್ಲದು, ಉಳಿಯುವುದು ಬರೀ ನೆನಪು ಮಾತ್ರ
ಈ ಕ್ಷಣ ನಿನ್ನದು, ನೆನ್ನೆ-ನಾಳೆಗಳು ಬರೀ ನೆಪ ಮಾತ್ರ||
ಎಲ್ಲವ ಸ್ವೀಕರಿಸಿ ಎಲ್ಲರೊಳಗೊಂದಾಗಿ ನಿರ್ವಹಿಸು ನಿನ್ನ ಪಾತ್ರ
ಇದುವೆ ನಿನ್ನ ಬದುಕಿಗೆ ಸುಖ ಶಾಂತಿಗಳ ತರುವ ಸೂತ್ರ||