ಬುಧವಾರ, ಡಿಸೆಂಬರ್ 30, 2015

ತತ್ವ



ಜಗತ್ತೇ ಹೀಗೆ, ಕಣ್ಣ ಮುಂದಿರುವವರೆಗು ನಿನ್ನ ಅಸ್ತಿತ್ವ
ಮರೆಯಾದರೆ ನಿನಗೆ ತಿಳುವುದು ಬದುಕಿನ ತತ್ವ

ನೆಮ್ಮದಿಯುಂಟು ಮರೆತುಬಿಡೆ ನಿನ್ನದಲ್ಲದ ಜಗತ್ತನ್ನು
ಜಯವುಂಟು, ಅರಿತು ಮುನ್ನಡೆ ನಿಲ್ಲದೆ ಯಾರಿಗೂ ನೀನಿನ್ನು.

ಸೋಮವಾರ, ಡಿಸೆಂಬರ್ 28, 2015

ಹೊಸತನ



ನೂರಾರು ಆಲೋಚನೆಗಳಿದ್ದರೂ ಅದೇಕೊ
ನಿನ್ನ ನೋಡುವ ಬಯಕೆಗೆ ಕಾಡಿದೆ ಓಂಟಿತನ||

ಒಂಟಿತನದ ತಪ್ಪಿಲ್ಲದಿದ್ದರೂ ಇಂದೇಕೊ
ಪ್ರೀತಿಗೆ ಸೋತ ಮನಸು ಕಳೆದುಕೊಂಡಿದೆ ತನ್ನತನ||

ಇದೆಲ್ಲದರ ಅರಿವಿದ್ದರೂ ನನಲ್ಲೇಕೋ
ಮೂಡಿದ ಕನಸುಗಳು ತಂದಿವೆ ನನ್ನಲ್ಲಿ ಮತ್ತೆ ಹೊಸತನ||

ಭಾನುವಾರ, ನವೆಂಬರ್ 01, 2015

ತಾಯಿಯ ನಮಿಸು



ನೀ...

ಸುಂದರ ಪ್ರಕೃತಿ ನೀಡಿದ ಕನ್ನಡಾಂಬೆಯ ನಮಿಸು
ಕನ್ನಡ ತಾಯಿಯ ಮಕ್ಕಳ ತ್ಯಾಗವ ಸದಾ ಸ್ಮರಿಸು
ಎಲ್ಲಿದ್ದರೇನು ಕನ್ನಡವ ಮರೆಯದೆ ನಿತ್ಯ ಪಠಿಸು
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಭಜಿಸು

ಸಮಸ್ತ ಕನ್ನಡ ಕುಲಕೋಟಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಸೋಮವಾರ, ಅಕ್ಟೋಬರ್ 19, 2015

ಚಿತ್ರಣ



ಬದುಕಾಗದಿರಲಿ ರಂಗು-ರಂಗಿನ ಮಳೆಬಿಲ್ಲಿನಂತೆ,
ಹತ್ತಿರ ಹೋದರೂ ಎಟುಕದು ಅದು ಕೈಗೆ.
ಬದುಕಾಗಲಿ ಬಿಳಿ ಹಾಳೆಗಳು ತುಂಬಿದ ಪುಸ್ತಕದಂತೆ,
ಮೂಡಲಿ ಅದರಲಿ ಚಿತ್ರಣ ನಾವು ಗೀಚಿದ ಹಾಗೆ.

ಶುಕ್ರವಾರ, ಅಕ್ಟೋಬರ್ 02, 2015

ನಿಲ್ಲಿರಿ!!!



ಭವಿಷ್ಯದ ಬಣ್ಣಗಳ ಬಾಳಿಗೆ ಬಿತ್ತರಿಸಿ
ಇಂದಿನ ಇರುವಿಕೆಯ ಇಚ್ಛೆಯ ಇಲ್ಲಿಯೆ ಇರಿಸಿ
ನಲುಮೆಯ ನೆನ್ನೆಯ ನೆನಪುಗಳೆ ನನ್ನಲ್ಲಿಯೇ ನಿಲ್ಲಿರಿ!!!

ಗುರುವಾರ, ಸೆಪ್ಟೆಂಬರ್ 17, 2015

ನಮ್ಮ ಗಣಪ



ನೂರಾರು ವೇಷ, ಬಗೆ-ಬಗೆಯ ರೂಪ ನಮ್ಮ ಗಣಪನಿಗೆ.
ರುಚಿ-ರುಚಿಯ ನ್ಯೆವೇದ್ಯ ಮೋದಕ ಪ್ರಿಯ ಗಣಪತಿಗೆ.

ವಿಘ್ನಗಳ ನಿವಾರಿಸಿ ಬದುಕನು ಹಸನಾಗಿಸುವ ಗಣಪನೇ ನಮಗೆ ಪ್ರೇರಕ ಶಕ್ತಿ.
ವಿಘ್ನೇಶ್ವರ, ಕರುಣಿಸು ನಮಗೆ ಸನ್ನಡತೆ ಹಾಗು ಬಾಳನು ಬೆಳಗಿಸುವ ಭಕ್ತಿ.

ಎಲ್ಲರಿಗು ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.

ಶನಿವಾರ, ಸೆಪ್ಟೆಂಬರ್ 05, 2015

ಶ್ರೀ ಕೃಷ್ಣ



ನಾನೆಲ್ಲಿದ್ದರೇನು ಮಾಸದು ನಿನ್ನ ಮೇಲಿನ ಭಕ್ತಿ,
ನಿನ್ನ ಬಿಟ್ಟರೆ ನನಗೆ ಗತಿ ಇನ್ಯಾರು.

ಕರುಣಿಸು ಮುಕ್ತಿ, ನೀಡು ಅದ ಪಡೆಯುವ ಯುಕ್ತಿ
ಶ್ರೀ ಕೃಷ್ಣಂ ವಂದೇ ಜಗದ್ಗುರು.

ಸೋಮವಾರ, ಜುಲೈ 20, 2015

ಋಣಿ!





ಎಲ್ಲಿ ಹೋದಿರಿ ದಿನಗಳೆ, ತಿಳಿಸಿ ಮತ್ತೆ ಬರುವಿರೆಂದು
ಕಾದಿರುವೆ ನಿಮಗಾಗಿ, ಸವಿಕ್ಷಣಗಳ ಹೆಕ್ಕಿ ತರುವಿರೆಂದು
ಸುಳ್ಳು ಮಾಡದಿರಿ ಕೊಟ್ಟ ಆಶ್ವಾಸನೆಗಳು ನನಗಂದು
ತಂದರೆ ಆ ದಿನಗಳ ಋಣಿಯಾಗಿರುವೆ ನಿಮಗೆ ನಾ ಎಂದೆಂದು.

ಗುರುವಾರ, ಜುಲೈ 16, 2015

ಸಿಂಚನ




ಬರಿದಾಗಿದೆ ನನ್ನ ಮನಸ್ಸು, ಜಿನುಗಲಿ ಪದಗಳ ಸಿಂಚನ
ಬರೆಯುವಂತಾಗಲಿ ಕೈಗಳು, ಮೂಡಲಿ ನನ್ನಿಂದ ಕವನ.

ಶನಿವಾರ, ಮೇ 02, 2015

ಹಾಗೆ ಸುಮ್ಮನೆ




ಎಲ್ಲಿ ಅಡಗಿರುವಿರಿ ಪದಗಳೆ, ಅರಸುತಿರುವೆ ನಾ ನಿಮ್ಮನೆ
ಭಾವಗಳ ಬರೆಯಿರಿ ಕರಗಳೆ, ಮೂಡಲಿ ಕವಿತೆ ಹಾಗೆ ಸುಮ್ಮನೆ!!!