ಸೋಮವಾರ, ನವೆಂಬರ್ 24, 2014

ಉತ್ತರತಣ್ಣೀರ ಎರಚಿ ಆಸೆಗಳಿಗೆ
ದೂರ ಹೋದೆ ಬರಲಾರದೆ ನನ್ನ ಹತ್ತಿರ

ನಿನ್ನ ಅಗಲಿಕೆಯ ಪ್ರಶ್ನೆಗಳಿಗೆ
ಈಗ ನನ್ನದು ಬರಿಯ ಕಣ್ಣೀರಿನ ಉತ್ತರ.

ಶನಿವಾರ, ನವೆಂಬರ್ 01, 2014

ಕನ್ನಡದ ಕಂಪುಮೂಡಣದಿ ಹಳದಿಯ ಚಿತ್ತಾರ, ಪಡುವಣದಿ ಕೆಂಪಿನ ಚಿತ್ತಾರ
ಇದ ಪ್ರಕೃತಿಯೇ ಬಿಡಿಸಿರುವಳು ತನ್ನ ಕೈಯ್ಯಾರ||
ಪಸರಿಸುವ ಕನ್ನಡದ ಕಂಪನು ಅವಳ ಅನುಸಾರ
ಆಚರಿಸುವ ಕನ್ನಡಮ್ಮನ ಹಬ್ಬವ ತುಂಬು ಮನಸಾರ||

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಮಂಗಳವಾರ, ಸೆಪ್ಟೆಂಬರ್ 30, 2014

ಬಾಳೆಂದರೆ?ಬಾಳೆಂದರೆ...
ಕಾಣದ ಕೈಗಳ ಬರವಣಿಗೆಯೊ?
ನಮ್ಮ ವಿಧಿಯ ಮೆರವಣಿಗೆಯೊ?

ಇನ್ನೂ ಹುಡುಕುತಲಿರುವೆ ಉತ್ತರ,
ಚಾಚಿದೆ ಕುತೂಹಲ ಬಾನೆತ್ತರ

ಮಂಗಳವಾರ, ಸೆಪ್ಟೆಂಬರ್ 23, 2014

ಬಂಡಿಮೂಡುವ ಹೊಸ ಕನಸುಗಳ
ಕಾಡುವ ಹಳೇ ನೆನಪುಗಳ
ಹಳಿಗಳ ಮೇಲೆ ಸಾಗಿದೆ ಜೀವನದ ಬಂಡಿ

ಕರುಣೆ ಬೇಡುವ ಕರಗಳ
ಪ್ರೀತಿ ನೀಡುವ ಮನಗಳ
ಬೆಸೆದಿಹುದು ಬಾಳಿನ ಕೊಂಡಿ!

ಶುಕ್ರವಾರ, ಆಗಸ್ಟ್ 29, 2014

ಎಲ್ಲೆಲ್ಲೂ ಗಣಪನೆಲೆಸಿರುವನು ನಮ್ಮಲ್ಲೇ ದೇವ ಗಜಾನನ
ಹರಸುತ ನಮ್ಮನ್ನು ಪ್ರತಿ ಕ್ಷಣ ಪ್ರತಿ ದಿನ

ಅಮ್ಮಂದಿರಿಗೆ ಪ್ರೀತಿಯ ಬಾಲಚಂದಿರ
ಕಂದಮ್ಮಗಳಿಗೆ ಮುದ್ದಿನ ಲಂಬೋಧರ

ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ವಿದ್ಯಾಗಣಪತಿ
ವಿಘ್ನ್ಯಗಳ ಅಳಿಸಿ ಹರಸುವ ಮಹಾಗಣಪತಿ

ಎಲ್ಲರಿಗೂ ಸುಬುದ್ಧಿ ನೀಡುವ ಬುದ್ಧಿವಿಧಾತ
ತನ್ನ ಭಕ್ತರಿಗೆ ಸದಾ ಸಿದ್ಧಿಸುವ ಸಿದ್ಧಿದಾತ

ನೆಲೆಸಿರುವನು ನಮ್ಮಲ್ಲೇ ದೇವ ಮೂಷಿಕವಾಹನ
ಈ ಹಬ್ಬದಲ್ಲಿ ಪರಿಶುದ್ದವಾಗಲಿ ನಮ್ಮ ತನು-ಮನ

ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು :)

ಭಾನುವಾರ, ಜುಲೈ 27, 2014

ಹೇಗೆ???ಹೇಗೆ ನುಡಿಯಲಿ ನೀನಿರದ ಪದಗಳನು
ಹೇಗೆ ಕಳಿಯಲಿ ನೀನಿರದ ಕ್ಷಣಗಳನು,
ಹೇಗೆ ಮರೆಯಲಿ ನಿನ್ನ ನೆನಪುಗಳನು,
ಹೇಗೆ ಅಳಿಸಲಿ ಅವು ಕೊಟ್ಟ ಕಣ್ಣೀರ ಹನಿಗಳನು!!!

ಬುಧವಾರ, ಜುಲೈ 16, 2014

ಧಾವಂತಪ್ರತಿ ಕ್ಷಣವೂ ನಿನ್ನ ನೋಡಲು ನನ್ನಲಿ ಧಾವಂತ
ನಿನ್ನ ಕಾಣದೆ ಸತ್ತಂತೆ, ಇದ್ದರೂ ನಾ ಜೀವಂತ!!!

ಗುರುವಾರ, ಜುಲೈ 03, 2014

ಏಕೆ???ಅದೆಲ್ಲೋ ಏಕೆ ಹುಡುಕಲಿ,
ನಿನ್ನದೆ ನೋಟವಿರಲು ನನ್ನ ಕಣ್ಣಲಿ
ನಿನ್ನನು ಏಕೆ ನಾ ನೆನೆಯಲಿ,
ಉಸಿರಾಗಿರುವಾಗ ನೀ ನನ್ನಲಿ||

ಮಂಗಳವಾರ, ಜೂನ್ 03, 2014

ಮಿತಭಾಷಿನನ್ನಿಂದ ಹೊರಡದ ಮಾತುಗಳು,
ನಿನ್ನ ಕಂಡಾಗಿನಿಂದ ನಾನಾಗಿರುವೆ ಮಿತಭಾಷಿ
ಮಿಟುಕದ ಕಣ್ಣ ರೆಪ್ಪೆಗಳು,
ಒಂದು ಕ್ಷಣ ನಿಂತ ಎದೆ ಬಡಿತವೆ ಅದಕೆ ಸಾಕ್ಷಿ!!!

ಗುರುವಾರ, ಏಪ್ರಿಲ್ 10, 2014

ಅಂಗಿ ಗುಂಡಿ!!!ರಂಗು ರಂಗಿನ ಅಂಗಿಯಂತೆ ಒಲವಿದು, ತೊಡಲು ಬೇಕಿದೆ ಕನಸಿನ ಗುಂಡಿಗಳು.
ಸುಂದರ ಮಾಲೆಯಂತೆ ಬದುಕಿದು, ಅದ ಬೆಸೆದಿವೆ ನೋವು ನಲಿವಿನ ಕೊಂಡಿಗಳು.

ಭಾನುವಾರ, ಮಾರ್ಚ್ 16, 2014

ಹೋಕುಳಿಸುಂದರ, ಪ್ರೀತಿಯ ಬಳುವಳಿ
ಎಲ್ಲರಿಗು ಹಂಚಿ ನಿಮ್ಮಲ್ಲಿ ಹೆಚ್ಚಿಸಿಕೊಳ್ಳಿ.

ಪ್ರೀತಿಯಂತೆ ಬಣ್ಣದ ಹೋಕುಳಿ
ಎಲ್ಲರಿಗು ಹಚ್ಚಿ ನೀವೂ ಹಚ್ಚಿಸಿಕೊಳ್ಳಿ!!!

ಸೋಮವಾರ, ಫೆಬ್ರವರಿ 24, 2014

ನೀನೆಂದರೆ...ನೀನೆಂದರೆ...

ಶುಭ್ರ ವಿಶಾಲ ಬಾನಿನಂತೆ
ಜೀವ ಉಳಿಸುವ ನೀರಿನಂತೆ
ತಂಪನು ತರವು ಗಾಳಿಯಂತೆ
ಕತ್ತಲ ಕರಗಿಸುವ ಬೆಂಕಿಯಂತೆ
ತಾಳ್ಮೆ ತೋರುವ ಭೂಮಿಯಂತೆ.

ಆಗಿರಲು ನೀ ಸುಂದರ ಪ್ರಕೃತಿಯಂತೆ
ಕಾಡದು ನೀ ನನ್ನೊಡನೆ ಇರದ ಚಿಂತೆ||

ಗುರುವಾರ, ಜನವರಿ 30, 2014

ಹೊಸ ತಿರುವುನಿಂತಿರುವೆ ಬಾಳಿನ ಹೊಸ ತಿರುವಿನಲ್ಲಿ
ಮುಂದೇನೆಂಬುದರ ಕಾಣದ ಸುಳಿವಿನಲ್ಲಿ.

ಮುಂದಿರುವುದು ಕನಸುಗಳ ಮಾರುವ ಬೀದಿಯೋ? ಇಲ್ಲಾ
ಅಂಕು ಡೊಂಕಿನ ಬಿದ್ದೇಳುವ ಹಾದಿಯೋ? ನಾ ತಿಳಿದಿಲ್ಲ!!!

ಕನಸುಗಳ ಬೀದಿಯಾದರೆ, ಅವುಗಳ ಕೊಂಡು ನನಸಾಗಿಸುವೆ
ಬೇರೆ ಹಾದಿಯಾದರೆ, ಬದುಕನು ಅದು ಹೇಗೋ ಸಾಗಿಸುವೆ.

ಆದರೂ
ನಿಂತಿರುವೆ ಬಾಳಿನ ಹೊಸ ತಿರುವಿನಲ್ಲಿ
ಮುಂದೆ ಸಾಗಲು ನಾಳೆಗಳ ಇರುವಿನಲ್ಲಿ.