ಗುರುವಾರ, ಮೇ 23, 2013

ಗುಂಡಿ-ಕೊಂಡಿ!ನೆನ್ನೆ ಸುರಿದ ಭಾರಿ ವರ್ಷಕೆ ನಮ್ಮೂರಿನ ರಸ್ತೆಗಳಲ್ಲೆಲ್ಲಾ ಕೆಸರು ತುಂಬಿದ ಗುಂಡಿಗಳು,
ಇಂದು ಸಿಕ್ಕ ಹಣದ ಸ್ಪರ್ಶಕೆ, ಮನುಜನಲ್ಲಿ ಕಳಚಿಕೊಂಡವು ಸಂಬಂಧಗಳ ಕೊಂಡಿಗಳು!

ಕೆಸರು ತುಂಬಿದ ಗುಂಡಿಗಳಿಂದ ಕೆಟ್ಟರೆ ಬಂಡಿ, ಕಳಚಿಕೊಂಡ ಸಂಬಂಧಗಳಿಂದ ಸಾಗದು ಜೀವನದ ಬಂಡಿ!

ಶುಕ್ರವಾರ, ಮೇ 17, 2013

ಇಳೆಯಾಗಿಇದ್ದೆ ನಾನಿಲ್ಲೇ ಅದೆಲ್ಲೋ ಕಳೆದುಹೋದ ಪದಗಳ ಹುಡುಕುತ್ತ,
ಮಧುರ ಭಾವಗಳು ಕಳಚಿ, ಮನವು ಆಗಿತ್ತು ಜಡಭಾವದ ಹುತ್ತ||

ಕಾತುರದಿ ಕಾಯುತಲಿದ್ದೆ ಹೊಸಚೈತನ್ಯವು ಸುರಿಸುವ ಪದಗಳ ಇಂಪು ಮಳೆಗಾಗಿ,
ಕೊನೆಗೂ ಬಂದ ಆ ವರ್ಷಕೆ, ಕಂಗೊಳಿಸಿಹುದು ಮನ, ಪದಗಳೇ ತುಂಬಿರುವ ಇಳೆಯಾಗಿ!