ಸೋಮವಾರ, ಅಕ್ಟೋಬರ್ 19, 2015

ಚಿತ್ರಣಬದುಕಾಗದಿರಲಿ ರಂಗು-ರಂಗಿನ ಮಳೆಬಿಲ್ಲಿನಂತೆ,
ಹತ್ತಿರ ಹೋದರೂ ಎಟುಕದು ಅದು ಕೈಗೆ.
ಬದುಕಾಗಲಿ ಬಿಳಿ ಹಾಳೆಗಳು ತುಂಬಿದ ಪುಸ್ತಕದಂತೆ,
ಮೂಡಲಿ ಅದರಲಿ ಚಿತ್ರಣ ನಾವು ಗೀಚಿದ ಹಾಗೆ.

ಶುಕ್ರವಾರ, ಅಕ್ಟೋಬರ್ 02, 2015

ನಿಲ್ಲಿರಿ!!!ಭವಿಷ್ಯದ ಬಣ್ಣಗಳ ಬಾಳಿಗೆ ಬಿತ್ತರಿಸಿ
ಇಂದಿನ ಇರುವಿಕೆಯ ಇಚ್ಛೆಯ ಇಲ್ಲಿಯೆ ಇರಿಸಿ
ನಲುಮೆಯ ನೆನ್ನೆಯ ನೆನಪುಗಳೆ ನನ್ನಲ್ಲಿಯೇ ನಿಲ್ಲಿರಿ!!!