ಭಾನುವಾರ, ಅಕ್ಟೋಬರ್ 28, 2012

ಕುಡಿನೋಟ


ನಿನ್ನ ಮೊದಲ ಕಣ್ಣೋಟದಿ ಹುಟ್ಟಿದ ಆಸೆಗಳು
ಇನ್ನೂ ಅವಿತು ಕುಳಿತಿವೆ ಬೆಚ್ಚಗಿನ ಮನದೊಳು.

ನಿಂತಲ್ಲೇ ನಿಂತಿರುವೆ, ಹಿಂದಿರುಗಿ ಒಮ್ಮೆ ನೋಡಬಾರದೆ
ಕುಡಿ ನೋಟಗಳ ಮಿಲನಕೆ ಕಾದಿರುವೆ, ನೀ ಕಾಣಬಾರದೆ.

ನನ್ನಲ್ಲಿ ಪ್ರೇಮಪರ್ವದ ಉಗಮ, ಆ ನಿನ್ನ ನೋಟಕೆ
ಕಳೆದುಹೋದೆನು ನಿನ್ನ ಕಣ್ಣ ರೆಪ್ಪೆಗಳ ಬಡಿತದ ಪರಿಪಾಠಕೆ.
ನೋಡು ನೀನೊಮ್ಮೆ...