ಶುಕ್ರವಾರ, ಡಿಸೆಂಬರ್ 30, 2016

ನನಸಾಗಲಿಬಲಿಯುತಲಿವೆ ರೆಕ್ಕೆಗಳು, ಕಂಡ ಸವಿಗನಸು ಹಾರುವುದೊಂದೆ ಬಾಕಿ||
ಮೂಡುತಿವೆ  ಭಾವಗಳು, ನನಸಾಗಲಿ ಅವು ಜಡವ ಬದಿಗೆ ನೂಕಿ||

ಭಾನುವಾರ, ಆಗಸ್ಟ್ 07, 2016

ಬಾಳು ಹಸಿರುಉಸಿರಾಡುವ ಮುನ್ನ ನೀನಾರು?
ಹುಟ್ಟಿದ ನಂತರವೇ ನೀ ಪಡೆಯುವೆ ಮೊದಲ ಹೆಸರು||
ಉಸಿರು ನಿಂತಾಕ್ಷಣ ನಿನಗಾರು?
ಸಾವಿನಲ್ಲಿ ಕಾಣುವೆ ಮುಕ್ತಿ ಕೊಡುವ ಕೊನೆಯ ನಿಟ್ಟುಸಿರು||

ಉಸಿರಾಡುವಾಗ ಕೆಟ್ಟ ದಾರಿ ಹಿಡಿದರೆ ಬಾಳು ಕೆಸರು,
ಬದುಕಿರುವಾಗ ಒಳಿತನ್ನು ಬಯಸಿದರೆ ಬಾಳು ಹಸಿರು!!!

ಶುಕ್ರವಾರ, ಮೇ 27, 2016

ಕೋರುವೆ


ನೀನೊಮ್ಮೆ ಮುಗುಳ್ನಕ್ಕರೆ ಕನಸಲೂ ನಿನ್ನನೇ ಕೋರುವೆ
ಎರಡು ಮಾತನಾಡಿದರೆ ಆ ಕ್ಷಣವೇ ನಾ ಸೋಲುವೆ
ಸೋತ ಈ ಹೃದಯ ನಿನಗೆ ಮೀಸಲು ಓ ಚೆಲುವೆ
ಎದೆಬಡಿತಕೆ, ಅದರ ಮಿಡಿತಕೆ ಕಾರಣ ನೀನೆ ಅಲ್ಲವೆ?

ಶುಕ್ರವಾರ, ಏಪ್ರಿಲ್ 08, 2016

ಯುಗಾದಿ ೨೦೧೬ತಂಪನು ತರಲಿ ಮಾವಿನ ತಳಿರು ತೋರಣ,
ಆನಂದವ ತುಂಬಲಿ ಹೋಳಿಗೆಯ ಹೂರಣ,
ಆರೋಗ್ಯ ಭಾಗ್ಯವ ನೀಡಿದರೆ ಬೇವಿನ ಕಹಿ,
ಸದಾ ಸಂತಸವನ್ನು ನೀಡಲಿ ಬೆಲ್ಲದ ಸಿಹಿ.
ಹೊಸ ವರ್ಷವಾಗಲಿ ನಿಮ್ಮ ಏಳಿಗೆಯ ತಳಹದಿ,
ನಿಮ್ಮಲ್ಲಿ ಸುಖ-ಶಾಂತಿಗಳ ಹರಿಸಲಿ ಈ ಯುಗಾದಿ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಭಾನುವಾರ, ಫೆಬ್ರವರಿ 14, 2016

ನಮಗೇಕೆನಿನ್ನೊಡನೆ ನಡೆವಾಗ ದೂರ ತೀರದ ಯೋಚನೆ ನನಗೇಕೆ
ನೀನು ನನ್ನಲ್ಲಿ ನುಡಿವಾಗ ಅನ್ಯರ ಆಲೋಚನೆ ನನಗೇಕೆ
ನಾನು ನಿನಗಾಗಿ ಇರುವಾಗ ಕಷ್ಟದ ಅರಿವು ನಿನಗೇಕೆ
ನನ್ನ ಪ್ರೀತಿಯು ಇರುವಾಗ ಲೋಕದ ಭಯವು ನಿನಗೇಕೆ
ಬೆರೆಯವರ ಬೇಡದ ಗಮನ ನಮಗೇಕೆ,
ನನಗೆ ನೀನು ನಿನಗೆ ನಾನಿರುವಾಗ...


ಶುಕ್ರವಾರ, ಫೆಬ್ರವರಿ 12, 2016

ಗೆದ್ದ ಯೋಧಬೀಸುವ ಹಿಮಗಾಳಿ ತಂದಿರಲು ಮರಗಟ್ಟಿಸುವ ಚಳಿ
ಬರಲು ಇಚ್ಛಿಸಿದ ಜವರಾಯ ನಿಮ್ಮ ಬಳಿ

ಶತ್ರುಗಳ ಹುಟ್ಟುಗಿಸುವ ನಿಮ್ಮಲ್ಲಿತ್ತು ಬದುಕನು ಜಯಿಸುವ ಕೆಚ್ಚು
ನಿಮ್ಮ ಸಾಹಸ ಕಂಡ ವಿಧಿಗೂ ಆಗಿರಬೇಕು ಹೊಟ್ಟೆ ಕಿಚ್ಚು

ನಿಮ್ಮ ಅಗಲಿಕೆಗೆ ಮರುಗಿವೆ ಹೃದಯಗಳು ನಮ್ಮೆಲ್ಲರ
ನಮಗೆಲ್ಲರಿಗೂ ಸ್ಪೂರ್ತಿಯ ಸೆಲೆಯಾದ ನೀವು ಅಜರಾಮರ

ಶುಕ್ರವಾರ, ಜನವರಿ 01, 2016

೨೦೧೬ನೆ ಇಸವಿಈ ಹೊಸ ವರ್ಷದಲ್ಲಿ...

ಯಶ ಸಂಪತ್ತುಗಳ ಮೀರಿದ್ದಾಗಲಿ ನಿಮ್ಮ ನೆಮ್ಮದಿ,
ಆಗಲಿ ನಿಮ್ಮ ಮನೆ-ಮನಸ್ಸು ಸುಖ-ಸಂತಸಗಳ ಸನ್ನಿಧಿ,
ನಿಮ್ಮ ಬಾಳಾಗಲಿ ನೆನಪಿನಲ್ಲಿಡುವಂತಹ ಸುಂದರ ತ್ರಿಪದಿ.

೨೦೧೬ನೆ ಇಸವಿಯ ಹಾರ್ದಿಕ ಶುಭಾಶಯಗಳು