ಶುಕ್ರವಾರ, ಸೆಪ್ಟೆಂಬರ್ 04, 2020

ರವಿ-ಚುಕ್ಕಿ-ಚಂದ್ರಮ

 


ಪೂರ್ಣ ಚಂದಿರನು ಚುಕ್ಕಿಗಳಿಗೆ ಹೇಳಿದ, ಆಗಸದಿ ನಾನಿರಲು ನೀವು ಹೊಳೆಯುವ ಮಾತೆಲ್ಲಿ...

ಚುಕ್ಕಿಗಳು ಹೇಳಿದವು, ನೀ ತಿಂಗಳಿಗೊಮ್ಮೆ ಹೊಳೆಯುವೆ, ತಿಂಗಳ ಪೂರ್ತಿ ಆಗಸವ ಸಿಂಗರಿಸುವೆವು ನಾವಿಲ್ಲಿ...

ಇವರಿಬ್ಬರ ಮಾತು ಕೇಳಿದ ರವಿಯು ತುಸು ನಕ್ಕು, ಸಿದ್ಧಗೊಂಡಿರುವನು ಉದಯಿಸಲು ಮೂಡಣದಲ್ಲಿ!!!


ಶುಕ್ರವಾರ, ಆಗಸ್ಟ್ 21, 2020

ಶ್ರೀ ಗೌರಿ-ಗಣೇಶ ಹಬ್ಬ ೨೦೨೦

 


ಎಲ್ಲೆಲ್ಲೂ ವಿಘ್ನಗಳೆ, ಪ್ರಪಂಚಕೆ ಲಗ್ಗೆ ಇಟ್ಟಾಗಿನಿಂದ ಕೊರೋನ
ಭಯ-ಭೀತಿಗಳೇ ಮೂಡಿರಲು ಆಗಿವೆ ಸುಖ ನೆಮ್ಮದಿಗಳ ನಿರ್ಗಮನ
ಜಗದ ಪರಿಸ್ಥಿತಿಯ ಸುಧಾರಿಸಲು ಬೇಕಿದೆ ಗಣಪತಿಯ ಆಗಮನ
ಮತ್ತೆ ಶಾಂತಿಯ ನೆಲೆಸಿ ನಮ್ಮನು ಹರಸು ಗೌರಿ ಸುತ ಗಜಾನನ

ಶ್ರೀ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು

ಶನಿವಾರ, ಆಗಸ್ಟ್ 15, 2020

ಸ್ವಾತಂತ್ರ್ಯ ದಿನಾಚರಣೆ ೨೦೨೦

 


ಬಲಿದಾನಗಳ ಬುನಾದಿಯಲಿ, ಭಾವೈಕ್ಯತೆಯ ಕಂಬವ ನೆಟ್ಟು, ಅಭಿವೃಧ್ದಿಯ ಪತಾಕೆಯ ಹಾರಿಸುವ ಬನ್ನಿ||

ರಾಗ-ದ್ವೇಷಗಳ ಮರೆತು, ಜಾತಿ-ಭೇದಗಳ ಬಿಟ್ಟು ಒಟ್ಟಾಗಿ ಕಲೆತು, ಎಲ್ಲರೂ ಶಾಂತಿ ಮಂತ್ರವ ತನ್ನಿ||

ವೇಷ-ಭಾಷೆ, ಧರ್ಮ-ಕರ್ಮ ಬೇರೆಯಾದರೂ ಹೆಮ್ಮೆಯಿಂದ  ನಾವೆಲ್ಲರು ಭಾರತೀಯರು ಎನ್ನಿ||


ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು

ಗುರುವಾರ, ಮೇ 28, 2020

ನನ್ನ ಪ್ರಶ್ನೆ - ನಿನ್ನ ಉತ್ತರ



ನನ್ನ ಪ್ರಶ್ನೆಗೆ ನಿನ್ನ ಪ್ರತಿಕ್ರಿಯೆಯ ನೋಡಲು ಹೆಚ್ಚಿದೆ ಕಾತರ
ಮನದೊಳು ಮೂಡಿದೆ ನೀನಂದು ನೀಡಿದ ಭಾಷೆಯ ಬಿತ್ತರ
ಕಿವಿಯೊಳಗೆ ಪಿಸುಗುಡಬಾರದೆ ಬಂದೊಮ್ಮೆ ನನ್ನ ಹತ್ತಿರ
ಅದಾಗದಿದ್ದರೂ ಮೌನದಿ ಕಣ್ಸನ್ನೆಯಲಿ ನೀಡು ನಿನ್ನ ಉತ್ತರ

ಶನಿವಾರ, ಫೆಬ್ರವರಿ 22, 2020

ನಿಂತು ಕಾಯಲೋ???




ಅದೆಲ್ಲಿಂದಲೋ ತಂಗಾಳಿಯಲಿ ತೇಲಿ ಬಂದ ನೆನಪಿನ ಸಂದೇಶ ನಿನ್ನದು...
ಅದರೊಡನೆ ತೇಲಿ ಸಾಗಲೋ... ನಿಂತು ನಿನಗೇ ಕಾಯಲೋ ಎನ್ನುವ ಸ್ಥಿತಿ ನನ್ನದು!!!

ಶುಕ್ರವಾರ, ಫೆಬ್ರವರಿ 21, 2020

ಶಿವನಾರು...



ಲೋಕವ ರಕ್ಷಿಸಲು ಹಾಲಾಹಲವ ಕುಡಿದ ವಿಷಕಂಠ
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸುವನು ಲಯಕಾರಕ ಭಗವಂತ||

ತಪಸ್ಸಿಗೆ ಕೂತರೆ ಅವನದ್ದು ಶಾಂತಿಯ ಸ್ವಭಾವ
ಮೂರನೆ ಕಣ್ಣನು ತೆರೆದರೆ ರುದ್ರನಾಗುವ ಮಹಾದೇವ||

ಶಕ್ತಿಯೊಡನೆ ಪ್ರಣಯ ನಾಟ್ಯವನ್ನಾಡಿದವನು ಅರ್ಧನಾರೀಶ್ವರ
ಪ್ರಳಯ ರುದ್ರ ತಾಂಡವನ್ನಾಡಿ ನಟರಾಜನಾದನು ಈಶ್ವರ||

ನಂಬಿದವರ ಕೈ ಬಿಡನು, ಇವನ ಮಹಿಮೆ ಅಪಾರ
ಸದಾ ತನ್ನ ಭಕ್ತರ ಜೊತೆಗಿರುವವನು ಶಂಭೋ ಶಂಕರ||

ಮಹಾಶಿವರಾತ್ರಿಯ ಹಾರ್ದಿಕ ಶುಭಾಶಯಗಳು

ಬುಧವಾರ, ಜನವರಿ 15, 2020

ಸಂಕ್ರಾತಿ ೨೦೨೦



ನೇಸರನು ಉದಯಿಸಿದನು ಸರಿಸುತ ಬದುಕಿನ ಮಬ್ಬ,
ವರುಷದ ಮೊದಲ ಸುಗ್ಗಿಯ ಆಚರಿಸುವ ತಿನ್ನುತ ಎಳ್ಳು-ಬೆಲ್ಲ-ಕಬ್ಬ,
ಎಲ್ಲರಿಗೂ ಸುಖ ಶಾಂತಿ ಶುಭವ ತರಲಿ ಈ ಸಂಕ್ರಾತಿ ಹಬ್ಬ||

ಸಂಕ್ರಾತಿ ಹಬ್ಬದ ಹಾರ್ದಿಕ ಶುಭಾಶಯಗಳು