ಬುಧವಾರ, ಮಾರ್ಚ್ 29, 2017

ಯುಗಾದಿ 2017ಬೆಲ್ಲದ ಸಿಹಿಯಲಿ ಕಹಿಯು ಕರಗಲಿ,
ಹಬ್ಬದ ಖುಷಿಯಲಿ ನೋವು ಸರಿಯಲಿ,
ಹೊಸ ವರ್ಷದಲಿ ಸುಖ ಸಂತಸಗಳು ನಿಮ್ಮದಾಗಲಿ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 

ಗುರುವಾರ, ಮಾರ್ಚ್ 23, 2017

ಕಂದಮ್ಮನಿನ್ನ ಪುಟ್ಟ ಕಣ್ಗಳ ಕಾಂತಿಯಲಿ ಬೆಳಗಿಹುದು ನನ್ನ ಬದುಕಿನ ಭಾವ,
ನಿನ್ನ ಪುಟ್ಟ ಕೈಗಳ ಸ್ಪರ್ಶದಿ ಮರೆತಿರುವೆ ನನೆಲ್ಲಾ ನೋವ,
ನಿನ್ನ ಕಿರುನಗೆಯ ಬಗೆಗೆ ಹಸನಾಗಿಹುದು ನನ್ನ ಬಡ ಜೀವ,
ನಿನ್ನಿಂದ ಮನೆಯಾಯಿತು ಸ್ವರ್ಗ, ಕಂದಮ್ಮ ನೀನೆ ನನ್ನ ದೈವ ||