ಬುಧವಾರ, ಆಗಸ್ಟ್ 21, 2013

ಹುಣ್ಣಿಮೆಯ ತವಕಭೂತಾಯಿಗೆ ಇಂದು ಆಗಸದ ಚಂದಿರನಿಂದ ಹಾಲ ಬೆಳಕಿನ ಅಭಿಷೇಕ,
ಎಲ್ಲೆಲ್ಲೂ ಹರ್ಷದ ಹೊನಲು, ಜಡ ಕತ್ತಲ ತೊಳೆದ ಆ ಬೆಳಕಿನ ಜಳಕ,
ಮೂಡಿಹುದು ನನ್ನಲ್ಲಿ, ತಂಗಾಳಿ ತೂಗುವ ಜೋಗುಳದಿ ನಿದ್ರಿಸುವ ಪುಳಕ,
ಸವಿನೆನಪುಗಳ ಹೊದ್ದ ಮನದೊಳು ಅದಾಗಲೆ ಮುಂದಿನ ಹುಣ್ಣಿಮೆಯ ತವಕ!

ಭಾನುವಾರ, ಆಗಸ್ಟ್ 04, 2013

ಅಮೂಲ್ಯ ಸ್ನೇಹಅಮೂಲ್ಯ ನಮ್ಮ ಸ್ನೇಹ, ಕೊಳ್ಳಲಾಗದು ಇದ ಕೋಟಿ ಹಣವು,
ತುಂಬಿರಲಿ ಹೀಗೆ ನಮ್ಮೀ ಸ್ನೇಹದಲ್ಲಿ ನಿಸ್ವಾರ್ಥದ ಗುಣವು.
ಇನ್ನೆಷ್ಟು ಜನ್ಮಗಳು ಬೇಕೊ ತೀರಲು ನಿಮ್ಮ ಸ್ನೇಹದ ಋಣವು,
ನಿಮ್ಮ ವಿಶ್ವಾಸವ ಸದಾ ಉಳಿಸಿಕೊಳ್ಳುವುದೇ ಜೀವನದ ಪಣವು.

ಎಲ್ಲಾ ಸ್ನೇಹಿತರಿಗೆ, ಸ್ನೇಹಿತರ ದಿನದ ಹಾರ್ದಿಕ ಶುಭಾಶಯಗಳು :)