ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು.
ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ.
ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು.
ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ.
ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಸೋಮವಾರ, ಜುಲೈ 20, 2015
ಋಣಿ!
ಎಲ್ಲಿ ಹೋದಿರಿ ದಿನಗಳೆ, ತಿಳಿಸಿ ಮತ್ತೆ ಬರುವಿರೆಂದು ಕಾದಿರುವೆ ನಿಮಗಾಗಿ, ಸವಿಕ್ಷಣಗಳ ಹೆಕ್ಕಿ ತರುವಿರೆಂದು ಸುಳ್ಳು ಮಾಡದಿರಿ ಕೊಟ್ಟ ಆಶ್ವಾಸನೆಗಳು ನನಗಂದು ತಂದರೆ ಆ ದಿನಗಳ ಋಣಿಯಾಗಿರುವೆ ನಿಮಗೆ ನಾ ಎಂದೆಂದು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ