ಭಾವನೆಯಿಂದ ಪದ,
ಪದಗಳಿಂದ ಸಾಲು,
ಸಾಲುಗಳಿಂದ ಕವನ,
ಕವನದಿಂದ ಭಾವನೆ||
ಜೀವ ತುಂಬಿದ ಭಾವನೆಗಳಿಂದ ಭಾವನೆ!
ಇದಕ್ಕೆ ಬೇಕು ಮನಸು ಮನಸುಗಳು ಜೋಡಣೆ||
ವಿಶ್ಲೇಷಣೆ:
ಭಾವನೆಗಳೆಂಬುದು ಒಬ್ಬ ಮನುಷ್ಯನ ಮನ ಸ್ತಿತಿಯನ್ನು ಸೂಚಿಸುತ್ತದೆ. ಒಂದು ಭಾವನೆಯಿಂದ ಹಲವು ಭಾವನೆಗಳು ಮೂಡುವುದು. ಉದಾಹರೆಣೆಗೆ ಪ್ರೀತಿಯೆಂಬ ಭಾವನೆಯಿಂದ ತ್ಯಾಗ, ವಿಶ್ವಾಸ ಎಂಬಿತ್ಯಾದಿ ಭಾವನೆಗಳು ಹುಟ್ಟುವುವು. ಇದರಂತೆಯೇ ಕೋಪದಿಂದ ಮೂಡುವುದು ಅಸೂಯೆ, ದ್ವೇಷ ಎಂಬ ಭಾವನೆಗಳು. ಹಾಗಾಗಿ ಒಳ್ಳೆಯ ಭಾವನೆಗಳು ಎಲ್ಲರಲ್ಲು ಚಿರಕಾಲ ಉಳಿಯಲಿ ಎಂದು ಆಶಿಸುತ್ತ ನಿಮ್ಮ ಮುಂದೆ ಈ ಒಂದು ಚಿಕ್ಕ ಕವನ...