ಶುಕ್ರವಾರ, ಆಗಸ್ಟ್ 10, 2012

ಅಂತರಂಗದೊಳು ಶ್ರೀಕೃಷ್ಣ



ಹೊರಗೆ ಹುಡುಕಲು ಕಾಣಲಿಲ್ಲ ಜಗದೊಡೆಯ ಶ್ರೀಕೃಷ್ಣನು,
ಕಣ್ಣು ಮುಚ್ಚಿ ಧ್ಯಾನಿಸಲು ನನ್ನ ಅಂತರಂಗದಲ್ಲಿಯೇ ಕಂಡನು.

ಜಗದಿ ತುಂಬಿದ ಅಧರ್ಮಗಳ ಜಯಿಸಬಾರದೆ ಎನ್ನಲು ನಾನು,
ಮೊದಲು ನಿನ್ನೊಳು ತುಳುಕಿರುವ ತುಮುಲಗಳ ಗೆಲ್ಲುವ ಎಂದನು.

ಸತ್ಯ ಧರ್ಮಗಳ ಬೋಧನೆ ಮಾಡಿದ ಜಗದ್ಗುರುವು ಈ ದೇವನು,
ಬಾಳಿನ ನಿಜದ ಅರಿವು ಮೂಡಿಸಿದ ನಮ್ಮ ಶ್ರೀಕೃಷ್ಣ ಪರಮಾತ್ಮನು.