ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು.
ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ.
ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು.
ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ.
ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಸುಂದರ ಪ್ರಕೃತಿ ನೀಡಿದ ಕನ್ನಡಾಂಬೆಯ ನಮಿಸು ಕನ್ನಡ ತಾಯಿಯ ಮಕ್ಕಳ ತ್ಯಾಗವ ಸದಾ ಸ್ಮರಿಸು ಎಲ್ಲಿದ್ದರೇನು ಕನ್ನಡವ ಮರೆಯದೆ ನಿತ್ಯ ಪಠಿಸು ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಭಜಿಸು
ಸಮಸ್ತ ಕನ್ನಡ ಕುಲಕೋಟಿಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು