ಶುಕ್ರವಾರ, ಡಿಸೆಂಬರ್ 14, 2018

ಕರಗುವೆನು



ಮಗಳೆ...

ನೀ ಮರುಗಿದಾಗ ಕೊರಗುವ ನಾನು,
ನೀ ನನ್ನೆದೆಗೆ ಒರಗಿದಾಗ ಕರಗುವೆನು!!!

ಬುಧವಾರ, ನವೆಂಬರ್ 07, 2018

ದೀಪಾವಳಿ ೨೦೧೮



ಇಲ್ಲವಾಗಲಿ ನಿಮ್ಮ ಬಾಳಿನ ಎಲ್ಲಾ ಕೊರತೆ,
ಅದಕ್ಕಾಗಿ ನೀವು ಹಚ್ಚಬೇಕಿದೆ ಸಹಬಾಳ್ವೆಯ ಹಣತೆ.

ಇಲ್ಲವಾಗಲಿ ನಿಮ್ಮ ಬಾಳಿನ ಎಲ್ಲಾ ಕಹಿ,
ಅದಕ್ಕಾಗಿ ನೀವು ಹಂಚಬೇಕಿದೆ ಪ್ರೀತಿಯ ಸಿಹಿ.

ಇಲ್ಲವಾಗಲಿ ಮನದ  ಕತ್ತಲೆಯ ಹಾವಳಿ,
ಅದಕ್ಕಾಗಿ ಆಚರಿಸಬೇಕಿದೆ ಬೆಳಕಿನ ದೀಪಾವಳಿ.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು

ಶನಿವಾರ, ಅಕ್ಟೋಬರ್ 20, 2018

ಸೇತುವೆ


ಮನಕೆ ಮುದ ನೀಡುವುದು ನಿನ್ನ ಮಧುರ ಮಾತಲ್ಲವೆ?
ಸವಿನುಡಿಗೆ ಮೂಡಿದೆ ಹೃದಯಗಳ ನಡುವೆ ಸೇತುವೆ||
ಸೇತುವೆ ಕಟ್ಟಿ ನನ್ನ ಬರಸೆಳೆದವಳು ನೀನಲ್ಲವೆ?
ನೀನೆಲ್ಲೇ ಇರು ನಾ ಬಂದು ನಿನ್ನನು ಸೇರುವೆ||

ಭಾನುವಾರ, ಅಕ್ಟೋಬರ್ 14, 2018

ಮೂರು-ಆರರ ಲೆಕ್ಕ

ಜಗವ ನೀ ಗೆದ್ದರೂ, ತಿಳಿದಿಕೊ ಕೊನೆಗೆ ನಿನ್ನದು ಮೂರು-ಆರರ ಲೆಕ್ಕ
ಜನರ ಮನಸ್ಸಿಗೆ ನೀ ಸೋತರೆ ಸುಖ-ದುಃಖದಲ್ಲಿ ಅವರೆಲ್ಲ ನಿನ್ನ ಪಕ್ಕ

ಸೋಮವಾರ, ಅಕ್ಟೋಬರ್ 08, 2018

ಪಿತೃ ಪಕ್ಷದ ಕಾಗೆ!



ಸಾವಿನ ಮನೆ-ಮನಗಳಂಗಳದಿ ಆರಿದ ಕಿಚ್ಚಿನಿಂದ ದುಃಖದ ಹೊಗೆ
ಅದೇ ಸಾವಿನ ಸುದ್ದಿ ಕೇಳಿ ಕೆಲವರೊಳಗೆ ಸಮಾಧಾನದ ನಗೆ
ಹಿಂದೊಮ್ಮೆ ಜರಿದವರ ಬಾಯಲ್ಲಿ ಪ್ರಶಂಸೆಗಳು ನೂರಾರು ಬಗೆ
ಬಳಲಿದ ಜೀವದ ಕಂಬನಿ ಒರೆಸದವರ ಕಣ್ಗಳಲಿ ಕಣ್ಣೀರ ಬುಗ್ಗೆ
ಬದುಕಲಿ ಹಸಿದಿದ್ದ ಜೀವ ಸತ್ತ ಮೇಲೆ ಪಿತೃ ಪಕ್ಷದ ಕಾಗೆ!

ಭಾನುವಾರ, ಸೆಪ್ಟೆಂಬರ್ 02, 2018

ಕೃಷ್ಣಾ...



ಕೃಷ್ಣಾ...

ಸಾಗರ ನೀನಾದರೆ... ನಿನ್ನ ಸೇರಲು ಹಂಬಲಿಸುವ ನದಿಗಳಂತೆ ನಾವು
ವೃಕ್ಷ ನೀನಾದರೆ... ನಿನ್ನ ಆಶ್ರಯ ಬಯಸುವ ಲತೆಗಳಂತೆ‌ ನಾವು
ಆಗಸ ನೀನಾದರೆ... ಅಲ್ಲಿ ಹಾರಿ ಏರುವ ಹಕ್ಕಿಗಳಂತೆ ನಾವು
ಜ್ಯೋತಿ ನೀನಾದರೆ...  ನಿನ್ನ ಸುತ್ತುವ ಸಣ್ಣ ಹುಳುಗಳಂತೆ ನಾವು
ವಾಯು ನೀನಾದರೆ... ಅದರಲ್ಲಿ ಬೆರೆತಿರುವ ಗಂಧದಂತೆ ನಾವು

ಪಂಚಭೂತಗಳಲ್ಲಿ ನೀನಿರುವಾಗ, ನಿನ್ನನು ಇನ್ನೆಲ್ಲಿ ಹುಡುಕಲಿ ಭಗವಂತ||
ನಿನ್ನ ಲೀಲೆಗಳ ನೋಡುವ ಬಯಕೆ, ಬಾಲಕನಾಗಿ ಕಣ್ಣೆದುರಿಗೆ ಬರಬಾರದೆ ನಮಗಂತ||

ಶನಿವಾರ, ಜುಲೈ 28, 2018

ಬದಲಾಗು



ಜಗದ ಗೋಜು ನಿನಗೇಕೆ, ನಿನ್ನವು ನಿನಗೆ ಸಾಲುತಿಲ್ಲವೆ?
ಅನ್ಯರ ಹುಳುಕ ಹುಡುಕುವೇಕೆ, ನಿನ್ನವು ನಿನಗೆ ಕಾಣುತಿಲ್ಲವೆ?
ನೀನೆ ಮೊದಲು ಬದಲಾಗಬಾರದೇಕೆ, ಅದುವೆ ಸರಿ ನಡೆಯಲ್ಲವೆ???

ಮಂಗಳವಾರ, ಮೇ 01, 2018

ಅಪ್ಪ




ಈಗ ನೀನು ಅದೆಲ್ಲಿರುವೆಯೊ ನಮಗೆ ತಿಳಿಯದು,
ಎಲ್ಲಿದ್ದರೇನು ನಿನ್ನ ನೆನಪುಗಳು ನಮ್ಮಿಂದ ಅಳಿಯದು,
ನೀನರದ ನೋವು ನಮ್ಮಲ್ಲಿ ಎಂದಿಗೂ ಸುಳಿಯದು,
ಏಕೆಂದರೆ ನೀ ನಮಗೆ ಮಾಡಿದ ತ್ಯಾಗ ಕಳೆಯದು,
ಎಲ್ಲೇ ಇರು ಸುಖ-ಶಾಂತಿಯ ಪಯಣವಾಗಲಿ ನಿನ್ನದು,
ನೀ ತೋರಿಸಿ ಕೊಟ್ಟ ಆದರ್ಶದ ಬದುಕಾಗಲಿ ನಮ್ಮದು||

ಭಾನುವಾರ, ಫೆಬ್ರವರಿ 04, 2018