ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು.
ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ.
ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು.
ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ.
ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಈಗ ನೀನು ಅದೆಲ್ಲಿರುವೆಯೊ ನಮಗೆ ತಿಳಿಯದು,
ಎಲ್ಲಿದ್ದರೇನು ನಿನ್ನ ನೆನಪುಗಳು ನಮ್ಮಿಂದ ಅಳಿಯದು,
ನೀನರದ ನೋವು ನಮ್ಮಲ್ಲಿ ಎಂದಿಗೂ ಸುಳಿಯದು,
ಏಕೆಂದರೆ ನೀ ನಮಗೆ ಮಾಡಿದ ತ್ಯಾಗ ಕಳೆಯದು,
ಎಲ್ಲೇ ಇರು ಸುಖ-ಶಾಂತಿಯ ಪಯಣವಾಗಲಿ ನಿನ್ನದು,
ನೀ ತೋರಿಸಿ ಕೊಟ್ಟ ಆದರ್ಶದ ಬದುಕಾಗಲಿ ನಮ್ಮದು||