ಶನಿವಾರ, ಅಕ್ಟೋಬರ್ 20, 2018

ಸೇತುವೆ


ಮನಕೆ ಮುದ ನೀಡುವುದು ನಿನ್ನ ಮಧುರ ಮಾತಲ್ಲವೆ?
ಸವಿನುಡಿಗೆ ಮೂಡಿದೆ ಹೃದಯಗಳ ನಡುವೆ ಸೇತುವೆ||
ಸೇತುವೆ ಕಟ್ಟಿ ನನ್ನ ಬರಸೆಳೆದವಳು ನೀನಲ್ಲವೆ?
ನೀನೆಲ್ಲೇ ಇರು ನಾ ಬಂದು ನಿನ್ನನು ಸೇರುವೆ||

ಭಾನುವಾರ, ಅಕ್ಟೋಬರ್ 14, 2018

ಮೂರು-ಆರರ ಲೆಕ್ಕ

ಜಗವ ನೀ ಗೆದ್ದರೂ, ತಿಳಿದಿಕೊ ಕೊನೆಗೆ ನಿನ್ನದು ಮೂರು-ಆರರ ಲೆಕ್ಕ
ಜನರ ಮನಸ್ಸಿಗೆ ನೀ ಸೋತರೆ ಸುಖ-ದುಃಖದಲ್ಲಿ ಅವರೆಲ್ಲ ನಿನ್ನ ಪಕ್ಕ

ಸೋಮವಾರ, ಅಕ್ಟೋಬರ್ 08, 2018

ಪಿತೃ ಪಕ್ಷದ ಕಾಗೆ!



ಸಾವಿನ ಮನೆ-ಮನಗಳಂಗಳದಿ ಆರಿದ ಕಿಚ್ಚಿನಿಂದ ದುಃಖದ ಹೊಗೆ
ಅದೇ ಸಾವಿನ ಸುದ್ದಿ ಕೇಳಿ ಕೆಲವರೊಳಗೆ ಸಮಾಧಾನದ ನಗೆ
ಹಿಂದೊಮ್ಮೆ ಜರಿದವರ ಬಾಯಲ್ಲಿ ಪ್ರಶಂಸೆಗಳು ನೂರಾರು ಬಗೆ
ಬಳಲಿದ ಜೀವದ ಕಂಬನಿ ಒರೆಸದವರ ಕಣ್ಗಳಲಿ ಕಣ್ಣೀರ ಬುಗ್ಗೆ
ಬದುಕಲಿ ಹಸಿದಿದ್ದ ಜೀವ ಸತ್ತ ಮೇಲೆ ಪಿತೃ ಪಕ್ಷದ ಕಾಗೆ!