ಸೋಮವಾರ, ನವೆಂಬರ್ 25, 2019

ಕಿಸೆ!!!


ಕಾಸಿಲ್ಲದಿದ್ದರೇನು ಕಿಸೆಯಲ್ಲಿ, ನಾ ಸಾಗಿರುವೆ ಕನಸುಗಳು ನನಸಾಗುವ ದಿಸೆಯಲ್ಲಿ...
ಒಂದೊಮ್ಮೆ ದಾರಿ ಮಂಕಾದರೂ ದೃಷ್ಠಿಯಲ್ಲಿ, ಕೊನೆಗೆ ನನಸಿನ ಫಲವು  ನನ್ನ ಮುಷ್ಠಿಯಲ್ಲಿ...
ನನ್ನದೊಂದು ಪುಟ್ಟ ಆಸೆ, ನನ್ನದಾಗಲಿ ಬರೀ ಕನಸುಗಳೆ ತುಂಬಿರುವ ಕಿಸೆ||

ಸೋಮವಾರ, ಸೆಪ್ಟೆಂಬರ್ 02, 2019

ಗೌರಿ-ಗಣೇಶ ಹಬ್ಬ 2019



ಗಣಪತಿ...
ನೀಡು ನಮ್ಮೆಲ್ಲರಿಗೂ ಸನ್ಮತಿ

ಬೆನಕ...
ನೀನಿರು ನಮ್ಮೊಡನೆ ಕೊನೆ ತನಕ

ವಿಘ್ನೇಶ್ವರ...
ನೀನಾಗು ನಮ್ಮ ಅಂತರಂಗದ ಸ್ವರ

ಗೌರಿಸುತ...
ಜನರ ಭಕ್ತಿ-ಭಾವಗಳೆಲ್ಲವೂ ನಿನಗೆ ಅರ್ಪಿತ

ಮೋದಕಹಸ್ತ...
ಮೊದಲ ಪೂಜೆ ಅರ್ಪಿಸುವುದು ಲೋಕ ಸಮಸ್ತ

ಗಜಾನನ...
ನಿನ್ನ ನಾಮದಿಂದ ಪರಿಶುದ್ಧವಾಗಲಿ ಎಲ್ಲರ ಮನೆ-ಮನ

ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು||

ಶನಿವಾರ, ಆಗಸ್ಟ್ 24, 2019

ಶ್ರೀ ಕೃಷ್ಣ ಜನ್ಮಾಷ್ಟಮಿ ೨೦೧೯

ಸೆರೆಮನೆಯಲಿ ಹುಟ್ಟಿ, ಮುಗ್ಧತೆಯಿಂದ ಜಗವನೆ ಸೆರೆಯಾಗಿಸಿದವನು
ಅಮ್ಮನ್ನಿಂದ ಕಿವಿ ಹಿಂಡಿಸಿಕೊಂಡು ಮುಂದೆ ಅರ್ಜನನ ಮುನ್ನಡೆಸಿದವನು
ತುಂಟಾಟದಿ ಸ್ತ್ರೀಯರ ವಸ್ತ್ರವ ಕದ್ದವ, ಸ್ತ್ರೀಯರ ಮಾನ-ಪ್ರಾಣ ಉಳಿಸಿದವನು
ಕೊಳಲು ನುಡಿಸಿದ ಕೋಮಲ ಕೈಗಳಲಿ ಸುದರ್ಶನವ ಹಿಡಿದವನು
ನಮ್ಮೆಲ್ಲರ ಕರ್ಮವ ತಿಳಿಸಿದವನು, ಲೋಕಕೆ ಧರ್ಮವ ಸಾರಿದವನು
ಎಲ್ಲರ ಮನೆಮಗನು ಮುಕಂದನು, ಜಗದೊಡೆಯ ನಮ್ಮ ಶ್ರೀ ಕೃಷ್ಣನು.

ಎಲ್ಲರಿಗೂ ಶ್ರೀ  ಕೃಷ್ಣ ಜನ್ಮಾಷ್ಟಮಿಯ ಶುಭಶಯಗಳು!!!

ಭಾನುವಾರ, ಆಗಸ್ಟ್ 04, 2019

ಸ್ನೇಹ!!!



ಆಗಸದ ನೀಲಿಯಂತೆ ತಿಳಿಯಾದ ಸ್ನೇಹ, ಭೂಮಿಯಷ್ಟೇ ಅಗಾಧವಂತೆ||
ಬೆಂಕಿಯಂತೆ ಪವಿತ್ರ‌ವಾದ ಸ್ನೇಹ, ಹರಿಯುವ ನೀರಿನ ನಿನಾದದಂತೆ||
ತಂಗಾಳಿಯ ಕಂಪ ಸೂಸುವುದು ಸ್ನೇಹ, ಪ್ರಕೃತಿಯೇ ಸ್ನೇಹಿಯಾಗಿರುವಾಗ ನಿನಗೇಕೆ ಚಿಂತೆ||

ಸ್ನೇಹಿತರ ದಿನದ ಶುಭಾಶಯಗಳು!!!

ಶನಿವಾರ, ಏಪ್ರಿಲ್ 06, 2019

ಯುಗಾದಿ ೨೦೧೯




ಹಚ್ಚ ಹಸುರಿನ ಚಿಗುರಿನ ನಡುವೆ ಹೆಚ್ಚಿದೆ ಪ್ರಕೃತಿಯ ಬೆಡಗು
ಮನೆಗಳಿಗೆ ರಂಗೋಲಿ, ತಳಿರು-ತೋರಣಗಳ ಮೆರುಗು||
ಒಳ್ಳೆ ಮಾತನಾಡುತ ಬೇವು ಬೆಲ್ಲವ ಸವಿಯೋಣ
ನಗುವ ಹಂಚುತ ಯುಗಾದಿ ಹಬ್ಬವ ಆಚರಿಸೋಣ||

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು

ಮಂಗಳವಾರ, ಜನವರಿ 15, 2019

ಸಂಕ್ರಾಂತಿ - ೨೦೧೯



ನಗುವ ಮೊಗವ ತೋರಿ,
ಪ್ರೀತಿ ಸಂಕೇತವ ಸಾರಿ,
ಎಳ್ಳು-ಬೆಲ್ಲವ ಬೀರಿ,
ಆಚರಿಸುವ ಸಂಕ್ರಾಂತಿ ಈ ಬಾರಿ

ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು