ಎಲ್ಲೆಲ್ಲೂ ವಿಘ್ನಗಳೆ, ಪ್ರಪಂಚಕೆ ಲಗ್ಗೆ ಇಟ್ಟಾಗಿನಿಂದ ಕೊರೋನ
ಭಯ-ಭೀತಿಗಳೇ ಮೂಡಿರಲು ಆಗಿವೆ ಸುಖ ನೆಮ್ಮದಿಗಳ ನಿರ್ಗಮನ
ಜಗದ ಪರಿಸ್ಥಿತಿಯ ಸುಧಾರಿಸಲು ಬೇಕಿದೆ ಗಣಪತಿಯ ಆಗಮನ
ಮತ್ತೆ ಶಾಂತಿಯ ನೆಲೆಸಿ ನಮ್ಮನು ಹರಸು ಗೌರಿ ಸುತ ಗಜಾನನ
ಶ್ರೀ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು. ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ. ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು. ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ. ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಬಲಿದಾನಗಳ ಬುನಾದಿಯಲಿ, ಭಾವೈಕ್ಯತೆಯ ಕಂಬವ ನೆಟ್ಟು, ಅಭಿವೃಧ್ದಿಯ ಪತಾಕೆಯ ಹಾರಿಸುವ ಬನ್ನಿ||
ರಾಗ-ದ್ವೇಷಗಳ ಮರೆತು, ಜಾತಿ-ಭೇದಗಳ ಬಿಟ್ಟು ಒಟ್ಟಾಗಿ ಕಲೆತು, ಎಲ್ಲರೂ ಶಾಂತಿ ಮಂತ್ರವ ತನ್ನಿ||
ವೇಷ-ಭಾಷೆ, ಧರ್ಮ-ಕರ್ಮ ಬೇರೆಯಾದರೂ ಹೆಮ್ಮೆಯಿಂದ ನಾವೆಲ್ಲರು ಭಾರತೀಯರು ಎನ್ನಿ||
ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು