ಮತ್ತದೆ ಮಳೆ, ಕಿಟಕಿಯಾಚೆ ಇಣುಕಲು, ಬರೀ ನಿನ್ನದೇ ನಿರೀಕ್ಷೆ
ಬರಲಿ ಮಿಂಚು, ಆ ಬೆಳಕಲಿ ಕಾಣು ನೀ, ನಿಲ್ಲಲಿ ಕಾಯುವ ಪರೀಕ್ಷೆ!!!
ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು. ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ. ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು. ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ. ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಮತ್ತದೆ ಮಳೆ, ಕಿಟಕಿಯಾಚೆ ಇಣುಕಲು, ಬರೀ ನಿನ್ನದೇ ನಿರೀಕ್ಷೆ
ಬರಲಿ ಮಿಂಚು, ಆ ಬೆಳಕಲಿ ಕಾಣು ನೀ, ನಿಲ್ಲಲಿ ಕಾಯುವ ಪರೀಕ್ಷೆ!!!
ನಿನ್ನೊಲವಿನ ತುತ್ತುಗಳ ಉಣಿಸಿ
ನೀ ಮರೆಯಾದರೂ...
ನಾನು ಅವುಗಳ ಎಣಿಸಿ,
ನೆನಪಿನ ಮುತ್ತುಗಳೊಡನೆ ಪೋಣಿಸಿ,
ನನ್ನ ಮನದಲ್ಲಿ ಭದ್ರವಾಗಿ ಇರಿಸಿರುವೆ!