ಮಂಗಳವಾರ, ಮೇ 29, 2012

ಸಕಲ



ಧಣಿಕನಾದರೂ ಇನ್ನೂ ಬೇಕೆನಿಸುವ ಹೊನ್ನಿನ ಹಂಬಲ,
ಕ್ಷಣಿಕವಾದರೂ ಎಂದೂ ಕ್ಷೀಣಿಸದ ಚಂಚಲೆಯ ಚಪಲ,
ಮಲಗಲು ಆರಕ್ಕೆ-ಮೂರಾದರೂ ಲೆಕ್ಕವಿರದಷ್ಟು ನೆಲ,
ಈ ಮೂರಕ್ಕೆ ದಾಸನಾದರೆ ನೀನಾಗುವೆ ಮನೋವಿಕಲ,
ಹಂಗಿಲ್ಲದೆ ಮುಂದೆ ಸಾಗಲು ದಕ್ಕುವುದು ನಿನಗೆ ಸಕಲ.

ಶುಕ್ರವಾರ, ಮೇ 18, 2012

ಹಸನಾಗಿಸು
















ಪ್ರೀತಿ ಕಾಣದ ಬರಡು ಹೃದಯಕೆ,
ಬೇಕಿದೆ ನಿನ್ನೊಲವಿನ ಸಿಂಚನ.

ಮರೆಯಾದ ಮನಸ್ಸಿನ ಭಾವಕೆ,
ಬೇಕಿದೆ ನಿನ್ನ ನೆನಪುಗಳ ಬಂಧನ.

ನಿನ್ನ ಪ್ರೀತಿಯ ಮಳೆಯ ಸುರಿಸಿ,
ಬರಡು ಹೃದಯವ ಹಸಿರಾಗಿಸು.

ಒಲವಿನ ಭಾವದ ಸುಧೆಯ ಹರಿಸಿ,
ನೊಂದ ಈ ಬಾಳನು ಹಸನಾಗಿಸು.