ಗುರುವಾರ, ನವೆಂಬರ್ 01, 2012

ಕನ್ನಡಾಂಬೆಅರ್ಪಿಸಿದರು ನುಡಿ ಪುಷ್ಪಗಳ ಮಾಲೆಯನು ನಿನಗೆ,
ಆದರೆ ನನ್ನದು ನಿನ್ನ ಪಾದದಿ ಇರುವ ಹೂವಿನ ಎಸಳು.

ಬೆವರು ಸುರಿಸಿ, ನೆತ್ತರು ಹರಿಸಿದರು ಕನ್ನಡ ಗುಡಿಗೆ,
ಸದಾ ಹರಿದಾಡಲಿ ನಮ್ಮ ಮೇಲೆ ಆ ಕಲಿಗಳ ನೆರಳು.

ಎಲ್ಲೂ ಇರದ, ಬೇರೆಲ್ಲೂ ಸಿಗದ ಶಕ್ತಿ ಕನ್ನಡ ನುಡಿಗೆ,
ತೊಟ್ಟಿರುವಳು ಕನ್ನಡಾಂಬೆ ತನ್ನ ಮಕ್ಕಳ ಅಭಿಮಾನದ ಹರಳು.

ಸಮಸ್ತ ಕನ್ನಡ ಕುಲ ಕೋಟಿಗೆ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು :)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ