ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು.
ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ.
ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು.
ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ.
ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಶನಿವಾರ, ಏಪ್ರಿಲ್ 07, 2012
ಪಾತರಗಿತ್ತಿ
ಸಮಯವೆಂಬ ಕಂಬಳಿ ಹುಳುವು ಕೊರೆದಿದೆ, ನನ್ನಲ್ಲಿ ಮೂಡಿದ ನಿನ್ನ ನೆನಪುಗಳೆಂಬ ಪುಷ್ಪಗಳ. ನನ್ನ ಕೈಗೆ ಸಿಗದೆ, ಅದೆಲ್ಲೊ ಇದ್ದು ಅಳಿಸಿದೆ, ಜೊತೆಗೆ ಕಳೆದ ಕ್ಷಣಗಳ ಸುಂದರ ಚಿತ್ತಾರಗಳ. ಹೀಗಿದ್ದರೂ ನನ್ನಲ್ಲಿ ಆಸೆಯೊಂದು ಜನಿಸಿದೆ, ಹುಳುವು ಆಗಿ ಪಾತರಗಿತ್ತಿ, ಹೊತ್ತು ತರಲಿ ನಿನ್ನ ಒಲವಿನ ಸಿಹಿ ಹನಿಗಳ!!!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ