ಮಂಗಳವಾರ, ಸೆಪ್ಟೆಂಬರ್ 04, 2012

ಗಾಳನಿನ್ನ ಕಣ್ಣೋಟದ ಸಾಗರದಿ ನಾ ಮುಳುಗಿದ್ದಾಯಿತು
ಹೊರಬರುವ ಮನಸ್ಸಿಲ್ಲದೆ ಅಲ್ಲೇ ಉಳಿದದ್ದಾಯಿತು

ಇನ್ನೇನಿದ್ದರು ನಿನ್ನ ಆಸೆಗಳೆಂಬ ಮೀನುಗಳೊಡನೆ ನನ್ನ ವಾಸ,
ಗಾಳವ ಬೀಸಿ ಹಿಡಿದಿಕೊ ನನ್ನ, ಕೊನೆಯಾಗಲಿ ಪ್ರೀತಿ ಉಪವಾಸ.

ನಿನಗೆ ಇಷ್ಟವಿಲ್ಲದಿದ್ದರೇನು, ಎಸೆದು ಬಿಡು ಎನ್ನ ಮತ್ತದೇ ಸಾಗಾರಕೆ
ಕಾತುರದಿ ಕಾಯುವೆ ಮತ್ತೆ ಸಿಕ್ಕಿಬೀಳಲೆಂದು ನಿನ್ನ ಮನಸಿನ ಗಾಳಕೆ!!!
1 ಕಾಮೆಂಟ್‌: