ಶುಕ್ರವಾರ, ಸೆಪ್ಟೆಂಬರ್ 14, 2012

ಸ್ವಾರ್ಥಸಂಬಂಧಗಳೆಂಬ ವೃಕ್ಷಗಳ ನೆರಳಲಿ ಬದುಕುವ ಮನುಜಗೆ,
ತನ್ನ ಜೀವನದಿ ಸಿಗುವ ಸಂಬಂಧಗಳು ಹಲವು ಬಗೆ.

ಕೆಲವು ಹೆಮ್ಮರದಂತೆ ನಿಂತರೆ, ಕೆಲವದ್ದು ಬರಡಾಗಿ ನಿಂತ ಆಕಾರ,
ಕೆಲವು ಇನ್ನೇನು ಬೀಳುವಂತಿದ್ದರೆ, ಇನ್ನೂ ಕೆಲವದ್ದು ಸಸಿಯ ಪ್ರಕಾರ.

ಹೀಗೆ ಇರಬಹುದು ಹಲವು ವಿಧದ ಸಂಬಂಧಗಳು, ನೂರು
ಆದರೀ ಸಂಬಂಧಗಳ ಬುಡದಲಿ ಇಹುದು ಸ್ವಾರ್ಥದ ಬೇರು

ಸಂಬಂಧವು ಚಿಕ್ಕದಾದರೂ, ಇರದಿರಲಿ ಅದರಲ್ಲಿ ಸ್ವಾರ್ಥವು
ಆಗಲೇ ದೊರೆಯುವುದು ಆ ಸಂಬಂಧಕೆ ನಿಜ ಅರ್ಥವು!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ