ಮಂಗಳವಾರ, ಡಿಸೆಂಬರ್ 04, 2012

ಪ್ರೀತಿಯ ಘಳಿಗೆಗಳುನಿನ್ನ ಒಲವೆಂಬುದು ದಿನದ ಘಳಿಗೆಗಳಂತೆ...
ನಿನ್ನ ಕಿರುನಗೆಯ ಹೊಂಗಿರಣಕೆ ಮನವು ಇಬ್ಬನಿಯಂತೆ ಕರಗಿ ಒಲವಿನ ಕುಸುಮವು ಚಿಗುರಿತು,
ನಡುಹೊತ್ತಿಗೆ ಕೋಪ, ಅಹಂಗಳ ಸುಡು ಬಿಸಿಲಿನ ಬೇಗೆಗೆ ಅರಳಿದ ಪ್ರೀತಿ ಹೂವು ಬಾಡಿತು,
ಸಂಜೆಯಾದೊಡನೆ ಎಲ್ಲವೂ ಶಾಂತ, ಪಡುವಣದ ಸೂರ್ಯನ ಜೊತೆಗೆ ಕಮರಿದ ಕನಸುಗಳು,
ಆವರಿಸಿತು ಕತ್ತಲು, ಆಯಿತು ಮನದ ಆಗಸವು ಬೆತ್ತಲು, ಅಲ್ಲಿ ಬರೀ ನೆನಪುಗಳ ಚುಕ್ಕಿಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ