ಬುಧವಾರ, ಡಿಸೆಂಬರ್ 29, 2010

ನೀಡು!

ನನಗೆ...
ಧಣಿವಾದರೆ ನಿನ್ನ ಪ್ರೀತಿಯ ಸುಧೆ ನೀಡು,
ಭಯವಾದರೆ ನಿನ್ನ ಮಾತಿನ ಆಸರೆ ನೀಡು,
ನೋವಾದರೆ ನಿನ್ನ ಸ್ಪರ್ಶದ ಔಷಧಿ ನೀಡು,
ಒಂಟಿತನವಾದರೆ ನಿನ್ನ ಹೆಜ್ಜೆಗಳ ಜೊತೆ ನೀಡು,
ಬೇಸರವಾದರೆ ನಿನ್ನ ನಗುವಿನ ಸಾಲ ನೀಡು,
ಖುಷಿಯಾದರೆ ನಿನ್ನ ಮನದ ಮನೆಗೆ ಔತಣ ನೀಡು.
ಏನಿಲ್ಲದಿದ್ದರೂ ನಿನ್ನೊಲವಿನ ಭರವಸೆ ನೀಡು||

ಶುಕ್ರವಾರ, ಡಿಸೆಂಬರ್ 24, 2010

ಒಲವು-ನಗುವು

ಸೂರ್ಯನ ಬೆಳಕಿನಿಂದ ಕರಗಿತು ಬೆಳ್ಳಿ ಇಬ್ಬನಿ,
ನಿನ್ನ ನಗುವಿನಿಂದ ಕಳೆಯಿತು ನನ್ನ ಮನದ ದುಗುಡ ಹನಿ!

ಚಂದಿರನ ಬೆಳಕಿನಿಂದ ಬೆಳಗಿತು ಕತ್ತಲೆಯ ಆಗಸ,
ನಿನ್ನ ಒಲವಿನಿಂದ ಬೆಳೆಯಿತು ನನ್ನ ಕನಸ್ಸೆಂಬ ಮಾನಸ!

ಶನಿವಾರ, ಡಿಸೆಂಬರ್ 18, 2010

ಬೇಡ ಭೇದ!

ನೀ ಬೆಳ್ಳಗಿದ್ದರೂ, ಕಪ್ಪಗಿದ್ದರೂ ನಿನ್ನ ನೆರಳು ಕಪ್ಪು,
ಇದು ತಿಳಿದಿದ್ದರೂ ಮಾಡಬೇಡ ವರ್ಣಭೇದದ ತಪ್ಪು||

ನೀ ಸಿರಿವಂತನಾದರೂ, ಬಡವನಾದರೂ ನೀ ತಿನ್ನುವುದು ಅನ್ನ,
ಇದು ಗೊತ್ತಿದ್ದರೂ ಸೂಸಬೇಡ ಬಡವ-ಬಲ್ಲಿದನೆಂಬ ತಾರತಮ್ಯದ ವಿಷವನ್ನ||

ನೀ ಹಿರಿಯಜಾತಿಯವನಾದರೂ, ಕೀಳು ಜಾತಿಯವನಾದರೂ ಗಾಳಿಯೇ ನಿನ್ನ ಉಸಿರು,
ಇದು ಅರಿತಿದ್ದರೂ ಅಂಟಿಸಿಕೊಳ್ಳಬೇಡ ನೀ ಜಾತಿಭೇದವೆಂಬ ಕೇಸರು||

ವಿಶ್ಲೇಷಣೆ:
ಈ ನಮ್ಮ ಸಮಾಜದ ಪಿಡುಗಾಗಿರುವ ನಾನಾ ರೀತಿಯ ಭೇದ-ಭಾವಗಳು, ನಮ್ಮನ್ನು ಕಾಡುತ್ತಲೆ ಇವೆ. ಮನುಜ ಎಷ್ಟೇ ಮುಂದುವರೆದಿದ್ದರೂ ಈ ವಿಶಯಗಳಲ್ಲಿ ಇನ್ನೂ ಹಿಂದುಳಿದಿದ್ದಾನೆ!
ಇವುಗಳಿಂದ ಹೊರಬಂದು ಎಲ್ಲದರಲ್ಲೂ-ಎಲ್ಲರಲ್ಲೂ ಒಂದಾಗಿ ಬಾಳಲಿ ಎಂಬುದೆ ಈ ಕವನದ ಆಶಯ!

ಶನಿವಾರ, ಡಿಸೆಂಬರ್ 11, 2010

"ಸಾಫ್ಟ್‍"-ವೇರ್ ಲೈಫ್

ಬೆಳಿಗ್ಗೆ ಏಳುವಾಗ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡಿ,
ತಡವಾದಾಗ ಜಿಂಕೆಯಂತೆ ಜಿಗಿಯುತ್ತ ಆಗುವ ರೆಡಿ.

ದಿನಪೂರ್ತಿ ಆಫೀಸಿನಲ್ಲಿ ಕತ್ತೆಯಂತೆ ಕೆಲಸವ ಮಾಡಿ,
ಕೆಲಸವಾಗದಾಗ ಎಲ್ಲ ಕಡೆ ಗೂಬೆಯಂತೆ ನೋಡಿ,
ಸಂಜೆಯಾದಂತೆ ಮರಿಹಾಕಿದ ಬೆಕ್ಕಿನಂತೆ ಅಡ್ಡಾಡಿ,
ಮನಗೆ ಹೋಗುವಾಗ ಆಗಿರುವುದು ದಣಿದ ಎತ್ತಿನಂತೆ ಬಾಡಿ.

ಮನ್ಯೇಜರ್ನನ್ನು ಪ್ರಮೋಷನಿಗಾಗಿ ಜಿಗಣೆಯಂತೆ ಕಾಡಿ,
ತನಗೆ ಸದಾ ಒಳ್ಳಯದಾಗಲಿ ಎಂದು ನಾಯಿಯಂತೆ ಬೇಡಿ,
ಕೊಡದಿದ್ದಾಗ ಹರಿಸುವ ಮೊಸಳೆಯಂತೆ ಕಣ್ಣೇರ ಕೋಡಿ,
ಕುರಿಯಂತೆ ತನ್ನೆಲ್ಲ ಸಹೋದ್ಯೋಗಿಗಳ ಜೊತೆಗೂಡಿ.

ವಾರದ ಕೊನೆಯಾದಂತೆ ನಲಿಯುವ ನವಿಲಂತೆ ಕುಣಿದಾಡಿ,
ಮುಗಿದಾಕ್ಷಣ ಆಫೀಸಿಗೆ ಮರಳುವ ಕಾಗೆಯಂತೆ ಕರ್ಕಶವಾಗಿ ಹಾಡಿ.

ಒಟ್ಟಿನಲ್ಲಿ ಒಂದು ಜಾನುವಾರು ಈ ನಮ್ಮ "ಸಾಫ್ಟ್‍ವೇರ್" ಎಂಜಿನೀಯರು!

ಭಾನುವಾರ, ಡಿಸೆಂಬರ್ 05, 2010

ಮನ-ಗುಣ

ಮನಸ್ಸೆಂಬುದು ಹೇಗಿರಬೇಕು???
ಶುಭ್ರವಾಗಿರುವ ಬೆಳ್ಳಗಿನ ಹಾಲಿನಂತಿರಬೇಕು... ಮತ್ತು ತರಿಸುವ ಮದಿರೆಯಂತಲ್ಲ.

ಗುಣವೆಂಬುದು ಹೇಗಿರಬೇಕು???
ದಿನಕಳೆದಂತೆ ಹೆಚ್ಚು ಸ್ವಾದಿಸುವ ಮದಿರೆಯಂತಿರಬೇಕು... ಹುಳಿಗೆ ಒಡೆಯುವ ಹಾಲಿನಂತಲ್ಲ.

ವಿಶ್ಲೇಷಣೆ:
ಇದು ಒಬ್ಬ ಮನುಜನ ಮನ-ಗುಣಗಳೆಗಿರಬೇಕೆಂಬುದರ ಒಂದು ಸಣ್ಣ ಉದಾಹರಣೆ.

ಹಾಲು ಹೇಗೆ ಸತ್ಯ, ನಿಸ್ವಾರ್ಥತೆಯನ್ನು ಸೂಚಿಸುವುದೋ ಹಾಗೆಯೆ ಒಬ್ಬನ ಮನಸ್ಸೆಂಬುದು ಯಾರಿಗೂ ಕೇಡನ್ನು ಬಯಸದೆ ಸದಾ ಒಳ್ಳೆಯದನ್ನೇ ಯೊಚಿಸಬೇಕು.

ಹೇಗೆ ದಿನಕಳೆದಂತೆ ಮದಿರೆಯ ಸ್ವಾದ ಹೆಚ್ಚುವುದೋ ಹಾಗೆಯೆ ಮನುಷ್ಯನ ಗುಣವೆಂಬುದು ಇರಬೇಕು ಹಾಗು ಯಾವುದೇ ಕಾರಣಕ್ಕೂ ಕೆಡಬಾರದು.