ಬೆಳಿಗ್ಗೆ ಏಳುವಾಗ ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡಿ,
ತಡವಾದಾಗ ಜಿಂಕೆಯಂತೆ ಜಿಗಿಯುತ್ತ ಆಗುವ ರೆಡಿ.
ದಿನಪೂರ್ತಿ ಆಫೀಸಿನಲ್ಲಿ ಕತ್ತೆಯಂತೆ ಕೆಲಸವ ಮಾಡಿ,
ಕೆಲಸವಾಗದಾಗ ಎಲ್ಲ ಕಡೆ ಗೂಬೆಯಂತೆ ನೋಡಿ,
ಸಂಜೆಯಾದಂತೆ ಮರಿಹಾಕಿದ ಬೆಕ್ಕಿನಂತೆ ಅಡ್ಡಾಡಿ,
ಮನಗೆ ಹೋಗುವಾಗ ಆಗಿರುವುದು ದಣಿದ ಎತ್ತಿನಂತೆ ಬಾಡಿ.
ಮನ್ಯೇಜರ್ನನ್ನು ಪ್ರಮೋಷನಿಗಾಗಿ ಜಿಗಣೆಯಂತೆ ಕಾಡಿ,
ತನಗೆ ಸದಾ ಒಳ್ಳಯದಾಗಲಿ ಎಂದು ನಾಯಿಯಂತೆ ಬೇಡಿ,
ಕೊಡದಿದ್ದಾಗ ಹರಿಸುವ ಮೊಸಳೆಯಂತೆ ಕಣ್ಣೇರ ಕೋಡಿ,
ಕುರಿಯಂತೆ ತನ್ನೆಲ್ಲ ಸಹೋದ್ಯೋಗಿಗಳ ಜೊತೆಗೂಡಿ.
ವಾರದ ಕೊನೆಯಾದಂತೆ ನಲಿಯುವ ನವಿಲಂತೆ ಕುಣಿದಾಡಿ,
ಮುಗಿದಾಕ್ಷಣ ಆಫೀಸಿಗೆ ಮರಳುವ ಕಾಗೆಯಂತೆ ಕರ್ಕಶವಾಗಿ ಹಾಡಿ.
ಒಟ್ಟಿನಲ್ಲಿ ಒಂದು ಜಾನುವಾರು ಈ ನಮ್ಮ "ಸಾಫ್ಟ್ವೇರ್" ಎಂಜಿನೀಯರು!
Super kano :)
ಪ್ರತ್ಯುತ್ತರಅಳಿಸಿTnx Sowm :)
ಪ್ರತ್ಯುತ್ತರಅಳಿಸಿToooooooooooooooooooo True :P
ಪ್ರತ್ಯುತ್ತರಅಳಿಸಿ