ಎಲ್ಲರಿಗು ನಾನು - ನನ್ನ ಮನಸ್ಸು ಮಾಡುವ ವಂದನೆಗಳು.
ಈ ಮನಸ್ಸೆಂಬುದು "ಭಾವನೆಗಳಿಗೆ" ಹಿಡಿದ ಕನ್ನಡಿ ಮತ್ತು ಒಬ್ಬ ಮನುಷ್ಯನ ಗುಣಗಳಿಗೆ ಇರುವ ಕೈಪಿಡಿ.
ವಿವಿಧ ಭಾವನೆಗಳಿಂದ ರೂಪಗೊಂಡವನೆ ಮನುಷ್ಯ. ಹಾಗಾಗಿ ಇಲ್ಲಿ "ನಾನು" ಎಂಬ ಪದದ ಅರ್ಥ "ಭಾವನೆ" ಎಂಬುದು.
ಹೇಗೆ, ಕನ್ನಡಿಯಲ್ಲಿ ಅದರ ಮುಂದಿರುವ ವಸ್ತುವಿನ ಆಕಾರ ಮತ್ತು ಅದರ ಹಿಂದಿನ ವಸ್ತುಗಳು ಕಾಣುವುದೊ, ಹಾಗೆ ಈ ಮನಸ್ಸೆಂಬ ಕನ್ನಡಿಯಲ್ಲಿ ಕಾಣುವುದು ಭಾವನೆ ಮತ್ತು ಅದರ ಹಿಂದಿರುವ ನೆನಪುಗಳು ಮಾತ್ರ.
ಹಾಗಾಗಿ ಇಲ್ಲಿ "ಭಾವಕನ್ನಡಿ" ಎಂಬುದರ ಅರ್ಥ "ಮನಸ್ಸು" ಎಂಬುದು!
ಬುಧವಾರ, ಸೆಪ್ಟೆಂಬರ್ 14, 2011
ಕಂಬನಿ
ನೀ ನನ್ನ ಬಳಿ ಇರುವಾಗ ನನ್ನೆದೆಯಲ್ಲಿ ಹುಟ್ಟಿತು ಪ್ರೇಮವಾಹಿನಿ, ನೀನಿಲ್ಲದಿದ್ದಾಗ ಹರಿಯುತ ಮೂಡಿಸಿತು ನನ್ನ ಕಣ್ಗಳಲಿ ಕಂಬನಿ||
ವಾಹಿನಿ ಹರಿದರೂ, ಕಂಬನಿ ಸುರಿದರೂ ನೀನೇ ನನ್ನ ಮಾನಿನಿ, ಪ್ರೀತಿ ಅಮೃತವ ನೀಡಿ ನನ್ನ ಉಳಿಸು ಬಾ, ಬಾಳ ಸಂಜೀವಿನಿ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ