ಬುಧವಾರ, ಅಕ್ಟೋಬರ್ 19, 2011

ಪೆದ್ದ


ನಾನೊಬ್ಬ ಏನೂ ಅರಿಯದ ಪೆದ್ದನೆಂದು ನೀವೆಲ್ಲ ತಿಳಿದಿರಿ,
ನನ್ನಂತ ದಡ್ಡ ಸಿಗುವುದಿಲ್ಲ ಎಂದು ಕೇಕೆ ಹಾಕಿ ನಕ್ಕಿರಿ.

ಎಲ್ಲರು ನಗಬೇಕೆಂದರೆ ನಾನು ಪೆದ್ದನೇ ಸರಿ ಎಂದು ಸುಮ್ಮನಿದ್ದೆ,
ಆದರೆ ನನ್ನೊಳಗಿದ್ದ ಅಂತರಾತ್ಮನಿಗೆ ಬರಲಿಲ್ಲ ಆ ಕ್ಷಣದಿಂದ ನಿದ್ದೆ.

ಹೋಗಲಿ ಬಿಡು ನಮಗ್ಯಾಕೆ ನಗುವವರ ಗೊಡವೆ ಎಂದು ನಾನವನಿಗೆ ಹೇಳಲು,
ಅದಕ್ಕವನೆಂದ, ಅವರು ಯಾರು ನೀ ಪೆದ್ದನೆಂದು ನಿನ್ನ ಬುದ್ದಿಶಕ್ತಿಯ ಅಳಿಯಲು?

ನಗುವವರಿಗೆ ಬುದ್ದಿ ಕಲಿಸುವೆನೆಂದು ನನ್ನ ಅಂತರಾತ್ಮನು ನನಗೆ ಮಾತು ಕೊಟ್ಟ,
ನನ್ನ ಕೆಚ್ಚೆದೆಯನ್ನು ಬಡಿದೆಬ್ಬಿಸಿ, ನನ್ನೊಳಗೆ ಆತ್ಮವಿಶ್ವಾಸದ ಕಿಡಿಯನ್ನು ಹತ್ತಿಸಿಬಿಟ್ಟ.

ನನ್ನ ನಾ ನಿರೂಪಿಸಿಕೊಳ್ಳುವವರೆಗು ನನ್ನ ಮಾತುಗಳಿಗೆ ನಾ ಸದಾ ಬದ್ಧ,
ನನ್ನ ನೋಡಿ ನಗುವವರಿಗಿಂತಲೂ ನನ್ನದು ಒಂದು ಕೈ ಮೇಲೆಂದು ತೋರಿಸುವೆ...ನಾನಲ್ಲ ಪೆದ್ದ!!!

2 ಕಾಮೆಂಟ್‌ಗಳು:

  1. ಚೆನ್ನಾಗಿದೆ ಮಾನ್ಯರೆ ಕವಿತೆ.ನಿಮಗೆ ಪದಗಳ ಮತ್ತು ಭಾವಗಳ ಹಿಡಿತವಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಈಗಿನ ನವೋದಯ ಕವಿತೆಗಳನ್ನು ಕವಿತೆಗಳನ್ನು ಹೆಚ್ಚು ಹೆಚ್ಚು ಓದಿ. ಶುಭವಾಗಲಿ.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಸಲಹೆಗೆ ಧನ್ಯವಾದಗಳು ರವಿ ಸಾರ್. ನೀವು ಹೇಳಿದಂತೆಯೆ ನಡೆಯುತ್ತೇನೆ!!!

    ಪ್ರತ್ಯುತ್ತರಅಳಿಸಿ